Sunday, 23 July 2017

ಅಂಗ ಲಿಂಗದಲ್ಲಿ ತರಹರವಾಗಿ

ಅಂಗ ಲಿಂಗದಲ್ಲಿ ತರಹರವಾಗಿ, ಸಮತೆ ಶಾಂತಿಯಲ್ಲಿ ತರಹರವಾಗಿ,
ಮನ ಜ್ಞಾನದಲ್ಲಿ ತರಹರವಾಗಿ, ಭಾವ ನಿರ್ಭಾವದಲ್ಲಿ ತರಹರವಾಗಿ ಇರಬಲ್ಲಡೆ,
ಆತನೆ ಅಚ್ಚಶರಣನು ಕಾಣಾ ಗುಹೇಶ್ವರಾ.

ಶಿವಭಕ್ತನಾಗಿ ತನ್ನ ಹಿಡಿದೆಹೆನೆಂದು ಹೋದಡೆ;

ಶಿವಭಕ್ತನಾಗಿ ತನ್ನ ಹಿಡಿದೆಹೆನೆಂದು ಹೋದಡೆ;
ನುಗ್ಗು ಮಾಡುವ, ನುಸಿಯ ಮಾಡುವ,
ಮಣ್ಣ ಮಾಡುವ, ಮಸಿಯ ಮಾಡುವ.
ಕೂಡಲಸಂಗಮದೇವರ ನೆರೆ ನಂಬಿದನಾದಡೆ;
ಕಡೆಗೆ ತನ್ನಂತೆ ಮಾಡುವ.

-ಬಸವಣ್ಣ

ಭೀಮನ ಅಮಾವಾಸ್ಯೆಯ ಮಹತ್

-:ಭೀಮನ ಅಮಾವಾಸ್ಯೆಯ ಮಹತ್ವ:-
         (ತಾ.23-7-2017, ರ ಭಾನುವಾರ)
                        ********
ಪತಿಗೆ ದೀರ್ಘಾಯುಷ್ಯ ಕರುಣಿಸಿ, ತಮ್ಮನ್ನು ದೀರ್ಘ ಸುಮಂಗಲಿಯಾಗಿ ಹರಸುವಂತೆ ಶಿವನನ್ನು ಪೂಜಿಸುವ ಹಬ್ಬ: 

ಶಿವ-ಪಾರ್ವತಿ
ಭಾರತೀಯ ಸಂಪ್ರದಾಯದಂತೆ ಹಿಂದೂಗಳು ಆಷಾಢದಲ್ಲಿ ಯಾವುದೇ ಶುಭಕಾರ್ಯ ಮಾಡುವುದಿಲ್ಲ. ಆದರೆ ಆಷಾಢದ ಅಮಾವಾಸ್ಯೆಯ ದಿನ ಜ್ಯೋತಿರ್ಭೀಮೇಶ್ವರ ವ್ರತವನ್ನು ನವದಂಪತಿಗಳು ಸಡಗರದಿಂದ ಆಚರಿಸುತ್ತಾರೆ. ಈ ವ್ರತಕ್ಕೆ ಪತಿ ಸಂಜೀವಿನಿ ವ್ರತ ಎಂದೂ ಕರೆಯುವುದುಂಟು. ಪತಿಗೆ ದೀರ್ಘಾಯುಷ್ಯವನ್ನು ಕರುಣಿಸುವಂತೆ, ತಮ್ಮನ್ನು ದೀರ್ಘ ಸುಮಂಗಲಿಯಾಗಿ ಹರಸುವಂತೆ ಕೋರಿ ಶಿವನನ್ನು ಪೂಜಿಸುವ ಹಬ್ಬವೇ ಭೀಮನ ಅಮಾವಾಸ್ಯೆ.
ಭೀಮನ ಅಮಾವಾಸ್ಯೆಯನ್ನು ಮದುವೆಯಾದ ಹೆಂಗಸರು ಮಾತ್ರವಲ್ಲ, ಮದುವೆಯಾಗದ ಹೆಣ್ಣುಮಕ್ಕಳು ಕೂಡ ಆಚರಿಸಬಹುದು. ಮದುವೆಯಾಗದ ಹೆಣ್ಣುಮಕ್ಕಳು ಒಳ್ಳೆ ಗಂಡ ಸಿಗಲಿ ಎಂದು ಹಾಗೂ ಮದುವೆಯಾದ ಹೆಣ್ಣು ತನ್ನ ಗಂಡನ ಆಯುಷ್ಯ ಹೆಚ್ಚಲಿ ಎಂದು ದೇವರನ್ನು ಪ್ರಾರ್ಥಿಸಿ ಈ ವ್ರತ ಕೈಗೊಳ್ಳುತ್ತಾರೆ.

ಪೂಜಾ ವಿಧಾನ
ಗೃಹಿಣಿಯರು ಕೈಗೆ ಕಂಕಣ ಕಟ್ಟಿಕೊಂಡು ಜ್ಯೋರ್ತಿಭೀಮೇಶ್ವರನ್ನು ಧ್ಯಾನಿಸಿ, ವ್ರತ ಕೈಗೊಳ್ಳಬೇಕು. ರಾಹುಕಾಲ ಹೊರತುಪಡಿಸಿ ಬೆಳಗ್ಗೆ ಅಥವಾ ಸಂಜೆ ಯಾವುದೇ ಶುಭ ಮುಹೂರ್ತದಲ್ಲಿ ವ್ರತ ಕೈಗೊಳ್ಳಬಹುದು. ಒಂದು ತಟ್ಟೆಯಲ್ಲಿ ಅಕ್ಕಿ ಹಾಕಿ, ಅದರ ಮೇಲೆ ಎರಡು ದೀಪದ ಕಂಭ ನೆಟ್ಟು, ದೀಪದ ಎಣ್ಣೆ ಹಾಕಿ ಹಚ್ಚಬೇಕು. ಈ ದೀಪಸ್ತಂಭದಲ್ಲಿ ಶಿವ ಪಾರ್ವತಿಯನ್ನು ಆವಾಹನೆ ಮಾಡಿ ಪೂಜೆ ಸಲ್ಲಿಸುತ್ತಾರೆ. ಪೂಜಾ ಸಾಮಗ್ರಿಗಳ ಜತೆಗೆ 9 ಗಂಟಿನ ಗೌರಿ ದಾರ ಇಟ್ಟು ಪೂಜೆ ಮಾಡಿ ಆ ಬಳಿಕ ಕೈಗೆ ಕಟ್ಟಿಕೊಳ್ಳಬೇಕು. ಮೊದಲು ಗಣಪತಿ ಪೂಜೆ ಮಾಡಿ ನಂತರ ಭೀಮೇಶ್ವರನ ಪೂಜೆ ಮಾಡುತ್ತಾರೆ. ನೈವೇದ್ಯಕ್ಕೆ 9 ಕರಿಗಡುಬು ಅರ್ಪಿಸಲಾಗುತ್ತದೆ. ಆ ಬಳಿಕ ಗಂಡನ ಪಾದಪೂಜೆಯನ್ನು ನೆರವೇರಿಸಬೇಕು.

ವಿವಿಧ ರೀತಿ ಆಚರಣೆ:
ವ್ರತಾಚರಣೆ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಭಿನ್ನತೆಯಿಂದ ಕೂಡಿದೆ. ಉದ್ದೇಶ ಒಂದೇ ಆದರೂ, ಆಚರಣೆಯಲ್ಲಿ ವಿವಿಧತೆಯನ್ನು ಕಾಣಬಹುದು. ದಕ್ಷಿಣ ಕನ್ನಡದಲ್ಲಿ ಇದನ್ನು ಆಟಿ ಅಮಾವಾಸ್ಯೆ ಎಂದು ಕರೆಯುತ್ತಾರೆ. ಈ ದಿನದಂದು ಆ ಭಾಗದ ಸಂಸ್ಕೃತಿ, ಆಚಾರ, ವಿಚಾರಗಳನ್ನು ಬಿಂಬಿಸುವ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಉತ್ತರ ಕನ್ನಡದ ಕೆಲವು ಭಾಗಗಳಲ್ಲಿ ಇದಕ್ಕೆ ಕೊಡೆ ಅಮಾವಾಸ್ಯೆ ಎಂದು ಕರೆಯುತ್ತಾರೆ. ಈ ದಿನದಂದು ಮಗಳೊಂದಿಗೆ ಮನೆಗೆ ಬಂದು ಅಳಿಯನಿಗೆ ಮಾವ ಕೊಡೆ ನೀಡಿ ಸತ್ಕರಿಸುತ್ತಾರೆ.
ಈ ಹಬ್ಬದ ಇನ್ನೊಂದು ವಿಶೇಷತೆ ಭಂಡಾರ:

ಭಂಡಾರವನ್ನು ಕರಿಗಡುಬು ಮೈದಾ ಹಿಟ್ಟಿನಿಂದ ಮಾಡಿಕೊಳ್ಳಬಹುದು. ಇದನ್ನು ಮಾಡುವಾಗ ಇದರೊಳಗೆ ದುಡ್ಡು/ನಾಣ್ಯವನ್ನು ಇಡಬೇಕು. ಇದನ್ನು ಹೊಸ್ತಿನ ಮೇಲೆ ಇಟ್ಟು ಪೂಜೆ ಮಾಡಬೇಕು. ಅಣ್ಣ/ತಮ್ಮ ಇದನ್ನು ಒಡೆಯುತ್ತಾರೆ. ಅವರಿಗೆ ಆರಿತ ಮಾಡಿ, ಒಳಗೆ ಇರುವ ದುಡ್ಡಿನ ಜತೆಗೆ ಉಡುಗೊರೆ ಕೊಡಬೇಕು.

ಪೌರಾಣಿಕ ಹಿನ್ನೆಲೆ:-
ಪುರಾಣಗಳ ಪ್ರಕಾರ ಶಿವನು ಪಾರ್ವತಿಯನ್ನು ಪತ್ನಿಯನ್ನಾಗಿ ಸ್ವೀಕರಿಸಿದ್ದು ಭೀಮನ ಅಮಾವಾಸ್ಯೆ ದಿನ. ಪಾರ್ವತಿ ಸಮೃದ್ಧಿ, ಸಂತಾನ, ಪತಿವ್ರತೆ, ಶಕ್ತಿಯ ಸಂಕೇತ. ಹೀಗಾಗಿ ಈ ದಿನದಂದು ಹೆಂಗಳೆಯರು ವ್ರತ ಕೈಗೊಂಡು ಶಿವ ಮತ್ತು ಪಾರ್ವತಿಯನ್ನು ಆರಾಧಿಸಿದರೆ ಅವರಿಗೆ ಉತ್ತಮನಾದ ಗಂಡ ಸಿಗುತ್ತಾನೆ. ಅದೇ ರೀತಿ ವಿವಾಹಿತ ಹೆಂಗಸರು ಗಂಡನಿಗೆ ದೀರ್ಘಾಯುಷ, ಯಶಸ್ಸು ಹಾಗೂ ಸಂತೋಷವನ್ನು ಬಯಸಿ ಪೂಜೆ ಸಲ್ಲಿಸುತ್ತಾರೆ.
ಶುಭವಾಗಲಿ

Saturday, 22 July 2017

ಒಮ್ಮೆ ನಾಯಿ ಮತ್ತು ಕತ್ತೆಯಾ ನಡುವೆ ಓಟದ ಸ್ಪರ್ಧೆ ನಡಿತಾಯಿತ್ತು.!

ಒಮ್ಮೆ ನಾಯಿ ಮತ್ತು ಕತ್ತೆಯಾ ನಡುವೆ ಓಟದ ಸ್ಪರ್ಧೆ ನಡಿತಾಯಿತ್ತು.!

ನಾಯಿಯು ತನ್ನ ಮನಸ್ಸಿನಲ್ಲಿ ಸಂತೋಷ ಪಡುತ್ತ ಕತ್ತೆ ಜೋತೆನ ನನ್ನ ಸ್ಪರ್ಧೆ ಎಂದು ಮುಗುಳ್ ನಗುತ್ತ, ಬಹಳ ಅಂತರದಿಂದ ಗೆಲ್ಲುವೆ ಎಂಬ ಆತ್ಮ ವಿಸ್ವಾಸದಿಂದ ಸ್ಪರ್ಧೆಗೆ ಇಳಿದಿತ್ತು.!
ಓಟ ಪ್ರಾರಂಭವಾಯಿತು, ನಾಯಿಯು ತನ್ನ ಸಂಪೂರ್ಣ ಬಲವನ್ನ ಉಪಯೋಗಿಸಿ ಕತ್ತೆಗಿಂತ ಮುಂದೆ ಓಡತೊಡಗಿತು.!
ಒಂದು ಓಣಿಯಿಂದ ಇನ್ನೋಂದು ಓಣಿಗೆ ಹೋಗುತ್ತಲೇ ಶುರುವಾಯಿತು ನೋಡಿ ಎದುರಾಳಿಗಳ ಕಾಟ, ಎದುರಾಳಿಗಳು ಯಾರಂತಿರಾ? ತನ್ನ ಕುಲಭಾಂದವರೇ, ತಾನು ಓಡುವುದನ್ನ ನೋಡಿ ಆ ಓಣಿಯಾ ನಾಯಿಗಳು ಅದನ್ನ ತಡೆಯಲು ಪ್ರಾರಂಭಿಸಿದವು,ಜಗಳಕ್ಕೆ ನಿಂತವು.
ಆಗ ಅದು ತನ್ನೆಲ್ಲ ಬಲವನ್ನು ಉಪಯೋಗಿಸಿ ಅಲ್ಲಿಂದ  ಮುಂದೆ ಸಾಗಿತು, ಮುoದೆ ಸಾಗಿದಂತೆ ಮತೋಂದು ಓಣಿ ಆ ಓಣಿ ಹೊಕ್ಕಿತು ಅಲ್ಲಿ ಹಿಂದಿನ ಓಣಿಕ್ಕಿಂತ ಹೆಚ್ಚು ನಾಯಿಗಳು ಎದುರು ನಿಂತವು, ಇದನ್ನ ಮುಂದೆ ಹೊಗದಂತ್ತೆ ತಡೆದು ಅದರ ಮೇಲೆ ಹರಿಹೈದವು, ಕಾಲುಯಳೆಯಲು ಪ್ರಾರಂಭಿಸಿದವು. ತಾನು ತನ್ನ ಕುಲಭಾಂದವರಿಂದ ತಪ್ಪಿಸಿ ಕೊಂಡು ಓಡಿ ತನ್ನ ಗುರಿತಲುಪವಸ್ಟಿಗೇ ಆ ಕತ್ತೆ ಯಾವುದೇ ಅಡೆ ತಡೆಯಿಲ್ಲದೆ ವಿಜಯವನ್ನು ಸಾದಿಸಿ ಬೀಟ್ಟಿತ್ತು.

ಅದನ್ನ ಕಂಡ ನಾಯಿ ತನ್ನ ಮನಸ್ಸಿನಲ್ಲೆ ನನ್ನವರೇ ನನಗೆ ಶತ್ರುಗಳಾದರಲ್ಲ ಎಂದು ಮರಗಿ, ಸೋತು ಸಣ್ಣಗಾಯಿತು..!
ಗೆಳೆಯರೇ ಈ ರೀತಿಯಾ ಸನ್ನಿವೆಶಗಳು ನಮ್ಮ ಬಹುಜನರ ಬಾಳಿನಲ್ಲಿ ನಡಿತ್ತಾನೇ ಬಂದಿವೆ. 
ನಮ್ಮನಮ್ಮಲ್ಲಿ ಹೊಡೆದಾಡುವುದು, ಕಾಲೆಳೆಯುವುದು ನಮ್ಮ ಸಮಾಜದಲ್ಲಿ ಕಂಡು ಬರುತ್ತದೆ. ಎಲ್ಲಿಯವರೆಗೆ ಒಗ್ಗಟ್ಟಾಗುವುದಿಲ್ಲವೋ ಅಲ್ಲಿಯವರೆಗೆ ಶತ್ರುಗಳು ತಮ್ಮ ಬೇಳೆ ಬೆಯಿಸಿಕೊಳ್ಳುತ್ತಾರೆ.

ಇದು ಸದ್ಯದ ಮಟ್ಟಿಗೆ ನಮ್ಮಲ್ಲೇ ನಡೆಯುತ್ತಿರುವ ನಿದರ್ಶನ ...

*ಇದನ್ನು ದಯವಿಟ್ಟು ಗಮನಿಸಿ ಬಂದುಗಳೆ* 

ಕನ್ನಡಿಗರಿಗೊಂದು ಕಿವಿಮಾತು

_*ಕನ್ನಡಿಗರಿಗೊಂದು ಕಿವಿಮಾತು*_

ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ  ಅಃ ಈಗೇ ಆ ಅಕ್ಷರಗಳನ್ನು ಪಠಿಸುವುದರಿಂದ ಮುಖವೆಲ್ಲಾ ಕದಡುತ್ತ ವ್ಯಾಯಮವಾಗುತ್ತದೆ.
ಶುದ್ಧ ಪರಿಶುದ್ಧ ಜೇನಿನ ಹಾಗೆ.... ನಮ್ಮ ಕನ್ನಡ ಭಾಷೆ ಇದೆ.
ಪೂರ್ವದಲ್ಲಿ ಗುರುಗಳು ಮಕ್ಕಳ ಹತ್ತಿರ ವರ್ಣಮಾಲೆಗಳನ್ನು ಬಾಯಿಪಾಠ ಮಾಡಿಸುತ್ತಿದ್ದರು. ಈಗೇ ಕಂಠಪಾಠ ಮಾಡುವುದರಿಂದ ಕಂಠದಿಂದ ಮುಖದವರೆಗೆ ನಮಗೆ ತಿಳಿಯದೆನೆ ವ್ಯಾಯಾಮವಾಗುತ್ತಿತ್ತು.
ಹೇಗೆಂದರೆ 👇🏻
ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ
ಈಗೇ ಅಕ್ಷರಗಳನ್ನು ಪಠಿಸುವುದರಿಂದ ಮುಖವೆಲ್ಲಾ ಕದಡುತ್ತಾ ವ್ಯಾಯಾಮವಾಗುತ್ತದೆ.
ಕ ಖ ಗ ಘ ಙ 👉🏻ಕಂಠ ಭಾಗ 
ಚ ಛ ಜ ಝ ಞ 👉🏻 ಕಂಠದ ಮೇಲಿನ ನಾಲಿಗೆಯ ಮೊದಲ ಭಾಗ
ಟ ಠ ಡ ಢ ಣ 👉🏻 ನಾಲಿಗೆಯ ಮಧ್ಯಭಾಗ 
ತ ಥ ದ ಧ ನ 👉🏻 ನಾಲಿಗೆಯ ಕೊನೆಯ ಭಾಗ 
ಪ ಫ ಬ ಭ ಮ 👉🏻 ತುಟಿಗಳು 
ಯ ರ ಲ ವ ಶ ಷ ಸ ಹ ಳ ಕ್ಷ ಜ್ಞ 👉🏻ಬಾಯೆಲ್ಲ ಈಗೇ ಮುಖವೆಲ್ಲಾ ಹಲ್ಲುಗಳ ಸಮೇತ ವ್ಯಾಯಾಮವಾಗುತ್ತದೆ. 

ಸುಂದರ ಸುಮಧುರ ಸೌಮ್ಯವಾದ ಮೃದುತ್ವದಿಂದ ಕೂಡಿದ ಪರಿಶುದ್ಧ ಜೇನು ನಮ್ಮ ಕನ್ನಡ ಭಾಷೆ.ಆನಂದವಾಗಿ ಮನಸ್ಸಿಗೆ ಹಾಯ್ ಆಗಿ ಕೇಳಿಸುವ ಮಾತುಗಳು ನಮ್ಮೆಲ್ಲರ ಬಾಯಿಂದ ಉಚ್ಚರಿಸಿದರೆ ಎಷ್ಟು ಚೆನ್ನಾಗಿರುತ್ತದೆ. ಕನ್ನಡ ಭಾಷೆಯನ್ನು ಅಂದವಾಗಿ ಬರೆಯುವವರಿಗೆ ಚಿತ್ರಕಲೆ ಸ್ವಂತವಾಗುವುದಂತೆ ಏಕೆಂದರೆ ನಮ್ಮ ವರ್ಣಮಾಲೆಗೆ ಅಷ್ಟು ಮೆಲುಕು ಇದೆಯಂತೆ.
ನಮ್ಮೊಳಗಿನ ಭಾವವನ್ನು ವಿವರವಾಗಿ ಮಾತೃಭಾಷೆಯಲ್ಲಿ ವರ್ಣಿಸುವಷ್ಟು ಮತ್ತೆ  ಬೇರೆ ಯಾವ ಭಾಷೆಯಲ್ಲೂ ವರ್ಣಿಸಲು ಸಾಧ್ಯವಿಲ್ಲ. ಕನ್ನಡಿಗರೆಂದರೆ ಮುಂಜಾವ ಅರಳಿದ ಪುಷ್ಪದಂತೆ  ಅವನ್ನೋಡಿದರೆ ಎಷ್ಟು ಆಹ್ಲಾದಬರಿತವಾಗುವುದೋ.... ಹಾಗೆ ಕನ್ನಡಿಗರ ಮನಸ್ಸು. 
ಕನ್ನಡದಲ್ಲಿ ಮಾತಾಡಿ...
ಕನ್ನಡದಲ್ಲಿ ಬರೆಯಿರಿ....
ಕನ್ನಡ ಪುಸ್ತಕಗಳನ್ನು ಓದಿರಿ... ಓದಿಸಿ....
ಪರಿಶುದ್ಧ ಕನ್ನಡ ಭಾಷೆಯ ಸವಿಯನ್ನು ಆಸ್ವಾದಿಸಿ. 

ಆವ ವಿದ್ಯೆಯ ಕಲಿತಡೇನು

ಆವ ವಿದ್ಯೆಯ ಕಲಿತಡೇನು
ಸಾವ ವಿದ್ಯೆ ಬೆನ್ನಬಿಡದು.
ಅಶನವ ತೊರೆದಡೇನು, ವ್ಯಸನವ ಮರೆದಡೇನು
ಉಸುರ ಹಿಡಿದಡೇನು, ಬಸುರ ಕಟ್ಟಿದಡೇನು
ಚೆನ್ನಮಲ್ಲಿಕಾರ್ಜುನದೇವಯ್ಯಾ, ನೆಲ ತಳವಾರನಾದಡೆ ಕಳ್ಳನೆಲ್ಲಿಗೆ ಹೋಹನು

-ಅಕ್ಕಮಹಾದೇವಿ

ಗೆಜ್ಜೆಯ ಬೆಲೆ ಸಾವಿರ ಸಾವಿರ ಹಾಕುವದು ಕಾಲಿನಲ್ಲಿ

-: 🌸ಸತ್ಯ🌸 :- 

🌸 ಗೆಜ್ಜೆಯ ಬೆಲೆ ಸಾವಿರ ಸಾವಿರ 
ಹಾಕುವದು ಕಾಲಿನಲ್ಲಿ ...

ಕುಂಕುಮದ ಬೆಲೆ ಪೈಸೆಯಲ್ಲಿ 
ಆದರೆ ಹಚ್ಚುವದು ಹಣೆಯಲ್ಲಿ ...

🌸💰 ಬೆಲೆ ಮುಖ್ಯವಲ್ಲ ..
    🔴ಇಲ್ಲಿ ಕೃತಿ ಮುಖ್ಯ ...

🌸 ಗೀತಾ ಮತ್ತು ಖುರಾನ್ ಒಂದೇ ಮನೆಯಲ್ಲಿ ಇದ್ದರೂ
ಎಂದು ಜಗಳ ಕಾಯುವುದಿಲ್ಲ...

ಇದರ ಬಗ್ಗೆ ಜಗಳಾಡುವವರು 
ಎಂದೋ ಇವುಗಳನ್ನು ಓದಿಲ್ಲ ..

🌸 ಉಪ್ಪಿನಂತೆ ಕಟುಮಾತುನು 
ಹೆಳುವವನು ನಿಜ ಸ್ನೇಹಿತ ...

ಸಕ್ಕರೆಯಂತೆ ಸಿಹಿ ಮಾತಾಡುವ 
ನಯ ವಂಚಕ....

🌸 ಅದಕ್ಕೇ ಉಪ್ಪಿನಲ್ಲಿ ಹುಳುಬಿದ್ದ ಇತಿಹಾಸವಿಲ್ಲಾ ....

ಇತಿಹಾಸದಲ್ಲಿ ಹುಳು ಬಿಳದ ಸಿಹಿಯಿಲ್ಲ...

🌸 ಈ..ಮಂದಿರ - ಮಶೀಧಿಗಳು 
ಬಹಳ ವಿಸ್ಮಯ ....

ಇಲ್ಲಿ ಭಿಕ್ಷುಕ ಹೊರಗೆ ಭಿಕ್ಷೇ ಬೇಡತಾನೆ...

ಶ್ರೀಮಂತಾ ಒಳಗೆ ಭಿಕ್ಷೇ ಬೆಡತಾನೇ.... 

🌸 ಕಾಣದ ದೇವರಿಗೆ ಹಾಲು ಖರ್ಜುರ ನೈವೇದ್ಯಾ ....

ಹಸಿದ ಬಡವನಿಗೆ ಒಣ ರೊಟ್ಟಿ ಹಳಸಿದ ಅನ್ನಾ ಇದು ಎಂತಾ ವಿದ್ಯಾ....

🌸 ಏ ಮಾನವಾ ಈ ಜೀವನವು ಆಷ್ಟೂಂದು ಒಳ್ಳೆಯದೇನಲ್ಲ ....

ಒಳ್ಳೆಯದೇ ಆಗಿದ್ದರೆ ಈ ಮನುಷ್ಯ 
ಅಳುತ್ತಾ ಈ ಜೀವನಕ್ಕೆ ಬರುತ್ತಿರಲಿಲ್ಲ ...

ಮತ್ತು ಹೊಗುವಾಗ ಎಲ್ಲರನು ಅಳಿಸಿ ಹೂಗುತ್ತಿರಲಿಲ್ಲ....

🌸 ಭಾ ಎಂದರೊ ಸನ್ನ ಮಾರ್ಗದಲ್ಲಿ ಯಾರು ಬರುಪದಿಲ್ಲ...

ಕರೆಯದಿದ್ದರೊ ಕೆಟ್ಟ ಮಾರ್ಗದಲ್ಲಿ ಎಲ್ಲರೂ ಬರುತ್ತಾರೆ....

ಅದಕ್ಕೇ...

🌸 ಸಾರಾಯೀ ಮಾರುವವ ಕುಳಿತಲ್ಲೀಯೇ ಎಲ್ಲರೂ.... ಹೂಕ್ತಾರೇ ...

ಆದರೆ ಹಾಲು ಮಾರುವವ ಅವನೇ ಎಲ್ಲರ ಬೀದಿ ಬೀದೀ ಮನೆ ಮನೆಗೆ ಬರತಾನೆ....

🌸 ಹಾಲು ಮಾರುವನಿಗೆ ಕೇಳತಾರೆ ಹಾಲಿನಲ್ಲಿ ನೀರು ಬೆರೆಸಿದಿಯಾ ಅಂತಾ.....

ದುಪ್ಪಟ್ಟು ಹಣ ಕೊಟ್ಟ ಕೊಂಡ ಸಾರಾಯಿಗೇ ತಾವೇ ಕೈಯಾರ ನೀರು ಬೆರಸಿ ಕುಡಿತಾರೆ..
ವಾರೆ ದುನಿಯಾ....ವಾ

🌸 ಮದುವೆ ಭಾರಾತುಗಳಲ್ಲಿ ಮದುಮಗ ಹಿಂದೆ ದುನಿಯಾ ಮುಂದೇ....

ಶವ ಯಾತ್ರೆಯಲ್ಲಿ ಹೆಣಾ ಮುಂದೆ 
ದುನಿಯಾ ಹಿಂದೆ ಹಿಂದೆ....

🌸 ಹೆಣವನ್ನು ಮಟ್ಟಿದರೆ ಸ್ನಾನ 
ಮಾಡ್ತಾರೆ ....

ಮೂಖ ಪ್ರಾಣಿಯ ಕೊಂದು ಅದರ ಹೆಣವನ್ನು ತಿಂತಾರೆ ...

🌸 ಮುಂಬತ್ತಿ ಹಚ್ಚಿ ಸತ್ತವರನು 
ನೆನೆಯುತ್ತಾರೆ ....

ಮುಂಬತ್ತಿಯ ಆರಿಸಿ ಜನ್ಮ ದಿನ 
ಆಚರಣೆಮಾಡ್ತಾರೆ....

🌸 ಯಾವುದು ನಿನ್ನ ಭಾಗ್ಯದಲ್ಲಿ 
ಇದೆಯೊ ಅದು ನಿನಗೆ ದೊರತೇ ದೊರೆಯುತ್ತದೆ ...

ಯಾವುದು ನಿನ್ನ ಭಾಗ್ಯದಲ್ಲಿ ಇಲ್ಲವೋ ಅದು ದೂರೆತರೊ ಹೊರಟು ಹೋಗುತ್ತದೆ ....

ಇದುವೇ ಸತ್ಯ :- 🙏🙏🙏
 ಸ್ನೇಹಿತರೇ

ಜೀವನದ ಸತ್ಯ ಹೇಳುವ ಒಂದು ಅರ್ಥಗರ್ಭಿತ ಕಥೆ.

ಜೀವನದ ಸತ್ಯ ಹೇಳುವ ಒಂದು ಅರ್ಥಗರ್ಭಿತ ಕಥೆ.

 ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು.
ಓದಿ ನಿಮಗೂ ಇಷ್ಟ ಆಗಬಹುದು.

ಮರಳುಗಾಡಿನಲ್ಲಿ ತನ್ನ ಗೆಳೆಯರ ಗುಂಪಿನೊಂದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಭಾರೀ ಮರಳುಗಾಳಿಗೆ ಸಿಲುಕಿ ಗುಂಪಿನಿಂದ ದೂರವಾದ. ದಾರಿ ಕಾಣದೆ ಕಳೆದು ಹೋದ. ಜನವಸತಿಯನ್ನು ಹುಡುಕಿ ಹೊರಟ. ಆದರೆ ಎತ್ತ ನೋಡಿದರೂ ಮರಳೇ ಮರಳು. ದಾರಿ ಕಾಣದಾದ. ಅಲೆದು ಅಲೆದು ಸುಸ್ತಾದ. ಆತನ ಬಳಿ ಇದ್ದ ಕ್ಯಾನ್ ಗಳಲ್ಲಿ ನೀರೂ ಖಾಲಿ ಆಗಿತ್ತು. ನೆತ್ತಿಯ ಮೇಲೆ ಸೂರ್ಯ ಸುಡುತ್ತಿದ್ದ. ಕೆಳಗೆ ಮರಳು ಕಾದ ಕೆಂಡವಾಗಿತ್ತು ನಡೆದು ನಡೆದು ಮೈಯಿಂದ ಬೆವರು ಇಳಿದು ಆ ವ್ಯಕ್ತಿ ನಿತ್ರಾಣನಾದ. ಇನ್ನು ತನಗೆ ನೀರು ಸಿಗದಿದ್ದರೆ ತನ್ನ ಜೀವ ಹೋಗುವುದು ಖಚಿತ ಎಂಬುದನ್ನು ಮನಗಂಡ. ಕೊನೆ ಉಸಿರಿರುವ ತನಕ ದಾರಿ ಹುಡುಕುವ ಛಲದಿಂದ ದೇವರ ಮೇಲೆ ಭಾರ ಹಾಕಿ ಮನಸ್ಸಿಗೆ ಸರಿ ಎನಿಸಿದ ದಿಕ್ಕಿನತ್ತ ಹೆಜ್ಜೆ ಹಾಕಿದ.

 ಸ್ವಲ್ಪ ದೂರ ನಡೆದ ಮೇಲೆ ಅವನಿಗೆ ಅಲ್ಲಿ ಒಂದು ಪಾಳು ಮನೆ ಕಾಣಿಸಿತು. ಈ ಮನೆಯಲ್ಲಿ ತನಗೆ ನೀರು ಸಿಗಬಹುದು ಎಂಬ ನಿರೀಕ್ಷೆಯಿಂದ ಅತ್ತ ಹೆಜ್ಜೆ ಹಾಕಿದ. ನೀರು, ಆಹಾರ ಇಲ್ಲದೆ ನಿತ್ರಾಣನಾಗಿದ್ದ ಅವನಿಗೆ ಅಷ್ಟು ದೂರ ನಡೆಯುವ ಶಕ್ತಿಯೂ ಇಲ್ಲದಾಗಿತ್ತು. ಸುಸ್ತಾಗಿ ಕುಸಿದು ಬಿದ್ದ, ಆದರೂ ಕೊನೆಯ ಆಸರೆ ಆ ಪಾಳು ಮನೆಯಲ್ಲಿ ಸಿಕ್ಕೀತು ಎಂದು ತೆವಳುತ್ತಾ ಸಾಗಿದ. ಕಷ್ಟ ಪಟ್ಟು ಆ ಮನೆಯ ಮುರಿದ ಬಾಗಿಲು ತಳ್ಳಿ ಒಳಹೋದ. ಕಾದ ನೆಲ, ಸುಡುತ್ತಿದ್ದ ಸೂರ್ಯನಿಂದಂತೂ ಮುಕ್ತಿ ದೊರಕಿತು.
 ಒಳ ಹೋದ ಆ ವ್ಯಕ್ತಿ ತನಗೆ ಕುಡಿಯಲು ನೀರು ಸಿಗುತ್ತದೆಯೇ ಎಂದು ಹುಡುಕಾಡಿದ.

ಅಲ್ಲಿ ಒಂದು ನೀರೆತ್ತುವ ಯಂತ್ರ ಇತ್ತು, ಆ ಯಂತ್ರಕ್ಕೆ ಪೈಪ್ ಜೋಡಿಸಲಾಗಿತ್ತು. ಪಂಪ್ ತಿರುಗಲು ಚಕ್ರವನ್ನೂ ಅಳವಡಿಸಲಾಗಿತ್ತು. ಚಕ್ರ ತಿರುಗಿಸಲು ಹ್ಯಾಂಡಲ್ ಹಾಕಲಾಗಿತ್ತು. ಇದನ್ನು ನೋಡಿದ ವ್ಯಕ್ತಿ ನೀರಿಗಾಗಿ ಹ್ಯಾಂಡಲ್ ತಿರುಗಿಸಿದ. ಚಕ್ರ ತಿರುಗಿತು, ಮೋಟರ್ ಸಹ ತಿರುಗಿತಾದರೂ ಪೈಪ್ ನಿಂದ ನೀರು ಬರಲಿಲ್ಲ.
ಚಕ್ರ ತಿರುಗಿಸಿ ತಿರುಗಿಸಿ ಸುಸ್ತಾದ ವ್ಯಕ್ತಿ. ಬೇರೆಲ್ಲಾದರೂ ನೀರು ಸಿಗುವುದೇ ಎಂದು ಹುಡುಕಿದ.

 ಆ ಪಾಳು ಮನೆಯ ಮೂಲೆಯಲ್ಲಿ ಒಂದು ಬಾಟಲಿ ಇತ್ತು. ಅದರಲ್ಲಿದ್ದ ನೀರು ಆವಿ ಆಗದಂತೆ ಮುಚ್ಚಳ ಹಾಕಲಾಗಿತ್ತು. ಸದ್ಯ ಬದುಕಿದೆಯಾ ಬಡಜಜೀವನದ ಸತ್ಯ ಹೇಳುವ ಒಂದು ಅರ್ಥಗರ್ಭಿತ ಕಥೆ.

 ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು.
ಓದಿ ನಿಮಗೂ ಇಷ್ಟ ಆಗಬಹುದು.

ಮರಳುಗಾಡಿನಲ್ಲಿ ತನ್ನ ಗೆಳೆಯರ ಗುಂಪಿನೊಂದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಭಾರೀ ಮರಳುಗಾಳಿಗೆ ಸಿಲುಕಿ ಗುಂಪಿನಿಂದ ದೂರವಾದ. ದಾರಿ ಕಾಣದೆ ಕಳೆದು ಹೋದ. ಜನವಸತಿಯನ್ನು ಹುಡುಕಿ ಹೊರಟ. ಆದರೆ ಎತ್ತ ನೋಡಿದರೂ ಮರಳೇ ಮರಳು. ದಾರಿ ಕಾಣದಾದ. ಅಲೆದು ಅಲೆದು ಸುಸ್ತಾದ. ಆತನ ಬಳಿ ಇದ್ದ ಕ್ಯಾನ್ ಗಳಲ್ಲಿ ನೀರೂ ಖಾಲಿ ಆಗಿತ್ತು. ನೆತ್ತಿಯ ಮೇಲೆ ಸೂರ್ಯ ಸುಡುತ್ತಿದ್ದ. ಕೆಳಗೆ ಮರಳು ಕಾದ ಕೆಂಡವಾಗಿತ್ತು ನಡೆದು ನಡೆದು ಮೈಯಿಂದ ಬೆವರು ಇಳಿದು ಆ ವ್ಯಕ್ತಿ ನಿತ್ರಾಣನಾದ. ಇನ್ನು ತನಗೆ ನೀರು ಸಿಗದಿದ್ದರೆ ತನ್ನ ಜೀವ ಹೋಗುವುದು ಖಚಿತ ಎಂಬುದನ್ನು ಮನಗಂಡ. ಕೊನೆ ಉಸಿರಿರುವ ತನಕ ದಾರಿ ಹುಡುಕುವ ಛಲದಿಂದ ದೇವರ ಮೇಲೆ ಭಾರ ಹಾಕಿ ಮನಸ್ಸಿಗೆ ಸರಿ ಎನಿಸಿದ ದಿಕ್ಕಿನತ್ತ ಹೆಜ್ಜೆ ಹಾಕಿದ.

 ಸ್ವಲ್ಪ ದೂರ ನಡೆದ ಮೇಲೆ ಅವನಿಗೆ ಅಲ್ಲಿ ಒಂದು ಪಾಳು ಮನೆ ಕಾಣಿಸಿತು. ಈ ಮನೆಯಲ್ಲಿ ತನಗೆ ನೀರು ಸಿಗಬಹುದು ಎಂಬ ನಿರೀಕ್ಷೆಯಿಂದ ಅತ್ತ ಹೆಜ್ಜೆ ಹಾಕಿದ. ನೀರು, ಆಹಾರ ಇಲ್ಲದೆ ನಿತ್ರಾಣನಾಗಿದ್ದ ಅವನಿಗೆ ಅಷ್ಟು ದೂರ ನಡೆಯುವ ಶಕ್ತಿಯೂ ಇಲ್ಲದಾಗಿತ್ತು. ಸುಸ್ತಾಗಿ ಕುಸಿದು ಬಿದ್ದ, ಆದರೂ ಕೊನೆಯ ಆಸರೆ ಆ ಪಾಳು ಮನೆಯಲ್ಲಿ ಸಿಕ್ಕೀತು ಎಂದು ತೆವಳುತ್ತಾ ಸಾಗಿದ. ಕಷ್ಟ ಪಟ್ಟು ಆ ಮನೆಯ ಮುರಿದ ಬಾಗಿಲು ತಳ್ಳಿ ಒಳಹೋದ. ಕಾದ ನೆಲ, ಸುಡುತ್ತಿದ್ದ ಸೂರ್ಯನಿಂದಂತೂ ಮುಕ್ತಿ ದೊರಕಿತು.
 ಒಳ ಹೋದ ಆ ವ್ಯಕ್ತಿ ತನಗೆ ಕುಡಿಯಲು ನೀರು ಸಿಗುತ್ತದೆಯೇ ಎಂದು ಹುಡುಕಾಡಿದ.

ಅಲ್ಲಿ ಒಂದು ನೀರೆತ್ತುವ ಯಂತ್ರ ಇತ್ತು, ಆ ಯಂತ್ರಕ್ಕೆ ಪೈಪ್ ಜೋಡಿಸಲಾಗಿತ್ತು. ಪಂಪ್ ತಿರುಗಲು ಚಕ್ರವನ್ನೂ ಅಳವಡಿಸಲಾಗಿತ್ತು. ಚಕ್ರ ತಿರುಗಿಸಲು ಹ್ಯಾಂಡಲ್ ಹಾಕಲಾಗಿತ್ತು. ಇದನ್ನು ನೋಡಿದ ವ್ಯಕ್ತಿ ನೀರಿಗಾಗಿ ಹ್ಯಾಂಡಲ್ ತಿರುಗಿಸಿದ. ಚಕ್ರ ತಿರುಗಿತು, ಮೋಟರ್ ಸಹ ತಿರುಗಿತಾದರೂ ಪೈಪ್ ನಿಂದ ನೀರು ಬರಲಿಲ್ಲ.
ಚಕ್ರ ತಿರುಗಿಸಿ ತಿರುಗಿಸಿ ಸುಸ್ತಾದ ವ್ಯಕ್ತಿ. ಬೇರೆಲ್ಲಾದರೂ ನೀರು ಸಿಗುವುದೇ ಎಂದು ಹುಡುಕಿದ.

 ಆ ಪಾಳು ಮನೆಯ ಮೂಲೆಯಲ್ಲಿ ಒಂದು ಬಾಟಲಿ ಇತ್ತು. ಅದರಲ್ಲಿದ್ದ ನೀರು ಆವಿ ಆಗದಂತೆ ಮುಚ್ಚಳ ಹಾಕಲಾಗಿತ್ತು. ಸದ್ಯ ಬದುಕಿದೆಯಾ ಬಡಜೀವ ಎಂದು ನೀರು ಕುಡಿಯಲು ಆ ಬಾಟಲ್ ಮುಚ್ಚಳ ತೆಗೆದ, ಇನ್ನೇನು ನೀರು ಕುಡಿಯಬೇಕು ಎನ್ನುವಾಗ, ಬಾಟಲಿ ಮೇಲೆ ಅಂಟಿಸಲಾಗಿದ್ದ ಚೀಟಿ ಕಾಣಿಸಿತು. ಅದರಲ್ಲಿ ಹೀಗೆ ಬರೆದಿತ್ತು.

"ನೀವು ಈ ನೀರನ್ನು ಯಂತ್ರದ ಪಕ್ಕದಲ್ಲಿರುವ ಫನಲ್ ನಲ್ಲಿ ಹಾಕಿ. ನಂತರ ಗಾಲಿ ತಿರುಗಿಸಿ ಜೋರಾಗಿ ನೀರು ಬರುತ್ತದೆ. ಸ್ನಾನ ಮಾಡಿ, ನಿಮ್ಮ ಬಳಿ ಇರುವ ಕ್ಯಾನ್ ಗಳಲ್ಲಿ ನೀರು ತುಂಬಿಸಿಕೊಳ್ಳಿ ಬಳಿಕ ಮರೆಯದೆ ಈ ಬಾಟಲಿಗೂ ನೀರು ತುಂಬಿಸಿ ಮುಚ್ಚಳ ಮುಚ್ಚಿ, ನಿಮ್ಮಂತೆ ನೀರು ಹುಡುಕಿ ಬರುವವರಿಗೆ ಇದು ಸಹಾಯ ಆಗುತ್ತದೆ."

 ವ್ಯಕ್ತಿ ಗೊಂದಲಕ್ಕೆ ಬಿದ್ದ. ಕೈಯಲ್ಲಿರುವ ನೀರು ಕುಡಿಯುವುದೋ, ಇಲ್ಲ ಚೀಟಿಯಲ್ಲಿ ಬರೆದಿರುವಂತೆ ನೀರನ್ನು ಫನಲ್ ಗೆ ಹಾಕಿ ಗಾಲಿ ತಿರುಗಿಸಿ ಹೆಚ್ಚು ನೀರು ಪಡೆಯಲು ಪ್ರಯತ್ನ ಮಾಡುವುದೋ ಎಂದು ಯೋಚಿಸಿದ. ಆಕಸ್ಮಾತ್ ಹಳೆಯ ಪಂಪ್ ನಿಂದ ನೀರು ಬಾರದಿದ್ದರೆ ಏನು ಮಾಡುವುದು ನೀರು ಕುಡಿದೇ ಬಿಡೋಣ ಎಂದುಕೊಂಡ. 
ಈ ನೀರು ಎಷ್ಟು ಹೊತ್ತು ಇರಲು ಸಾಧ್ಯ.
 ಈಗ ಜೀವ ಉಳಿದರೂ ನಾನು ಜನವಸತಿ ಹುಡುಕಿ ಹೊರಟರೆ ಮತ್ತೆ ನೀರಡಿಕೆಯಿಂದ ಸಾಯುವುದು ಖಂಡಿತ. ಹೆಚ್ಚು ನೀರು ಸಿಕ್ಕರೆ  ಬಾಟಲಿ, ಕ್ಯಾನ್ ಗಳಿಗೆ ತುಂಬಿಸಿಕೊಂಡು ಮುಂದೆ ಸಾಗಬಹುದು ಎಂದು ದೃಢ ನಿರ್ಧಾರ ಮಾಡಿ ಬಾಟಲಿಯಲ್ಲಿದ್ದ ನೀರನ್ನು ಪಂಪ್ ನ ಫನಲ್ ಮುಚ್ಚಳ ತೆರೆದು ಹಾಕಿದ, ಗಾಲಿ ತಿರುಗಿಸಿದ ಯಥೇಚ್ಛವಾಗಿ ನೀರು ಬಂತು. ಸ್ನಾನ ಮಾಡಿದ ಆಯಾಸ ತೀರಿಸಿಕೊಂಡ. ತನ್ನ ಬಾಟಲಿಗಳಿಗೆ, ಕ್ಯಾನ್ ಗಳಿಗೆ ನೀರು ತುಂಬಿಸಿದ. ಆ ಪುಟ್ಟ ಕ್ಯಾನ್ ಗೂ ನೀರು ಹಾಕಿ ಆ ಚೀಟಿಯ ಕೆಳಗೆ ಈ ಯಂತ್ರ ನೀರು ಹಾಕಿದರೆ ಕೆಲಸ ಮಾಡುತ್ತದೆ. ಅಂಜಿಕೆ ಬೇಡ ಎಂಬ ಸಾಲು ಸೇರಿಸಿದ. ಬಳಿಕ ಇನ್ನೇನು ಹೊರಡಬೇಕು ಎಂದು ಬಾಗಿಲು ತೆಗೆದಾಗ ಆ ಬಾಗಿಲ ಹಿಂದೆ ಜನವಸತಿಗೆ ಸಾಗುವ ದಾರಿ ತೋರುವ ನಕ್ಷೆ ಕಾಣಿಸಿತು. ಆ ನಕ್ಷೆಯ ಮಾರ್ಗ ಅನುಸರಿಸಿ ಊರು ಸೇರಿದ.

ನಾವು ಯಾವಾಗಲೂ ಜೀವನದಲ್ಲಿ ಹತಾಶರಾಗಬಾರದು.

ಕೊನೆ ಕ್ಷಣದವರೆಗೂ ಹೋರಾಟ ಮಾಡಬೇಕು. 
 ಎಲ್ಲಕ್ಕಿಂತ ಮಿಗಿಲಾಗಿ ನಾವು ಈ ಸಮಾಜಕ್ಕೆ ಏನಾದರೂ ಕೊಟ್ಟರೆ ನಮಗೆ ಸಮಾಜ ಏನನ್ನಾದರೂ ಕೊಡುತ್ತದೆ ಎಂಬುದನ್ನು ಅರಿಯಬೇಕು.

ಆ ವ್ಯಕ್ತಿ ತಾನು ಇದ್ದ ನೀರು ಕುಡಿಯದೆ ಪ್ರಯತ್ನ ಮಾಡಿದ್ದಕ್ಕೆ ಅವನಿಗೆ ಯಥೇಚ್ಛ ನೀರು ಸಿಕ್ಕಿತು. ಮತ್ತೆ ಆತ ಬಾಟಲಿಗೆ ನೀರು ತುಂಬಿಸಿಟ್ಟಿದ್ದರಿಂದ ಮುಂದೆ ಬರುವವರಿಗೂ ಅದು ನೆರವಾಗುವಂತಾಯಿತು.

 ನಾವು ಸದಾ ಭವಿಷ್ಯದ ಚಿಂತನೆ ಮಾಡಿದರೆ ಬದುಕು ಬಂಗಾರವಾಗುತ್ತದೆ.
ಸ್ವಾರ್ಥಕ್ಕೆ ಸಿಲುಕಿದರೆ ಬದುಕು ನಾಶವಾಗುತ್ತದೆ. 

ತನ್ನ ಎಡೆಯಲ್ಲಿ ಕಪ್ಪೆ ಸತ್ತು ಬಿದ್ದುದನ್ನರಿಯದೆ

ಶಣ್ಮುಖ ಶಿವಯೋಗಿಗಳ ವಚನ
 ತನ್ನ ಎಡೆಯಲ್ಲಿ ಕಪ್ಪೆ ಸತ್ತು ಬಿದ್ದುದನ್ನರಿಯದೆ 
ಪರರ ಎದೆಯಲ್ಲಿ ನೊಣವನರಿ 
ಸುವ ಮರುಳ ಮಾನವರoತೆ,
ತನ್ನoಗ ಮನದ ಅವಗುಣವ.
ನೂಕಲರಿಯದೆ ಪರರ ಅವಗುಣವನೆಣೆಸುವ, ಮರುಳ 
ಮಾನವರನು ಎನಗೆ ತೋರ
ದಿರಾ ಅಖoಡೇಶ್ವರಾ."
       ವ್ಯಕ್ತಿ ತನ್ನಲ್ಲಿರುವ ತಪ್ಪು ಅವಗುಣಗಳನ್ನು, ತಪ್ಪುಗಳನ್ನು 
ಎಣಿಸುತ್ತಿರುತ್ತಾರೆ. ಅದನ್ನೇ ಶಿವ ಯೋಗಿಗಳು ಹೀಗೆ ಹೇಳಿದ್ದಾರೆ.
ತನ್ನ ಮುoದಿರುವ ತಟ್ಟೆಯಲ್ಲಿ 
ಕಪ್ಪೆ ಸತ್ತು ಬಿದ್ದುದನ್ನು ನೋಡದೇ ಇನ್ನೋಬ್ಬರ   ತಟ್ಟೆ  ಯಲ್ಲಿನ ನೊಣವನ್ನು ನೋಡು
ತ್ತಿರುತ್ತಾರೆ. ಹಾಗೆಯೇ ತನ್ನ ಅoಗದ ಮತ್ತು ಮನದ ಅವಗು
ಣಗಳನ್ನು ಎಣಿಸುವ ಮರುಳ 
ಮಾನವರ ಮುಖವನ್ನು ನನಗೆ 
ತೋರಿಸದಿರು ತoದೆ ಎಂದು ಹೇಳಿದ್ದಾರೆ. ಅoದರೆ ಮೊದಲು 
ತನ್ನನ್ನು ತಾನು ತಿದ್ದಿಕೊoಡು ನo ತರ ಬೇರೆಯವರನ್ನು ತಿದ್ದುವದು ಒಳಿತು. ತನ್ನಲ್ಲಿಯೇ ಕೆಟ್ಟ ಗುಣ 
ಗಳನ್ನು ಇಟ್ಟುಕೊoಡು ಇನ್ನೊ 
ಬ್ಬರ ಅವಗುಣಗಳ ಬಗ್ಗೆ ಮಾತ 
ನಾಡುವದು ಎಷ್ಟು ಸರಿ ? ಈ 
ನಿಟ್ಟಿನಲ್ಲಿ ಎಲ್ಲರೂ ತಮ್ಮನ್ನು 
ತಾವು ಅವಲೋಕನ ಮಾಡಿಕೊ ಳ್ಳಲಿ ಎಂಬುದೇ ಶರಣರ ಆಶಯ.

ಕೈಲಾಸ ದೊಡ್ಡದಲ್ಲ; ಕಾಯಕ ದೊಡ್ಡದು. ಧರ್ಮ ದೊಡ್ಡದಲ್ಲ;

ಕೈಲಾಸ ದೊಡ್ಡದಲ್ಲ; ಕಾಯಕ ದೊಡ್ಡದು. ಧರ್ಮ ದೊಡ್ಡದಲ್ಲ; ದಯೆ ದೊಡ್ಡದು. ಅರಿವು ದೊಡ್ಡದಲ್ಲ; ಆಚಾರ ದೊಡ್ಡದು. ಅಧಿಕಾರ ದೊಡ್ಡದಲ್ಲ; ಅಭಿಮಾನ ದೊಡ್ಡದು. ಆಸ್ತಿ ದೊಡ್ಡದಲ್ಲ; ಆರೋಗ್ಯ ದೊಡ್ಡದು. ಸನ್ಮಾನ ದೊಡ್ಡದಲ್ಲ; ಸಂಸ್ಕಾರ ದೊಡ್ಡದು.ಹಣ ದೊಡ್ಡದಲ್ಲ; ಗುಣ ದೊಡ್ಡದು. ಮನೆ ದೊಡ್ಡದಲ್ಲ; ಮನ ದೊಡ್ಡದು.  ವಿದ್ಯೆ ದೊಡ್ಡದಲ್ಲ; ಅನುಭವ ದೊಡ್ಡದು.

Thursday, 20 July 2017

ಐದು ರತ್ನದ ಮೇಲೆ ಒಂದು ಮಾಣಿಕ್ಯವ ಕಂಡೆನಯ್ಯ.


ಓ೦ ಶ್ರೀಗುರು ಬಸವಲಿಂಗಾಯ ನಮಃ

"ಐದು ರತ್ನದ ಮೇಲೆ ಒಂದು ಮಾಣಿಕ್ಯವ ಕಂಡೆನಯ್ಯ. ಆ ಮಾಣಿಕ್ಯವ ಒಂದು ಕೋಗಿಲೆ ನುಂಗಿ ಕೂಗುತಿದೆ ನೋಡಾ. ಆ ಕೋಗಿಲೆಯ ಒಬ್ಬ ಬೇಂಟೆಕಾರ ಕಂಡು ತಟ್ಟನೆ ಎಚ್ಚಿ ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗ ಪ್ರಭುವೆ."

ಭಾವರ್ಥ=
ಶಿವಶರಣರಾದ ಜಕ್ಕಣಯ್ಯ ನಿರಾಳ ಮಂತ್ರಗೋಪ್ಯ ಈ ವಚನದಲ್ಲಿ ಮುಖ್ಯವಾಗಿ ಕಾಣುವಂಥದ್ದು ಸಾಕಾರದಿಂದ ನಿರಾಕಾರದಡೆಗೆ ಯಾವ ರೀತಿ ನಡೆದು ಹೋದೆ ಎಂಬ ತಮ್ಮ ಈ ವಿಚಿತ್ರ ಅನುಭವವನ್ನ ತುಂಬ ಗೋಪ್ಯವಾಗಿ ಬೆಡಗಿನ ರೀತಿಯಲ್ಲಿ ನುಡಿದಿದ್ದಾರೆ.

"ಐದು ರತ್ನದ ಮೇಲೆ ಒಂದು ಮಾಣಿಕ್ಯವ ಕಂಡೆನಯ್ಯ."
ಈ ವಚನದ ಮೊದಲ ಸಾಲಿನಲ್ಲಿ ಅತ್ಯಂತ ಸೂಕ್ಷ್ಮ ಸಂವೇದನೆಯೊಂದಿಗೆ ತಮ್ಮ ಅನುಭವವನ್ನ ವ್ಯಕ್ತಪಡಿಸಿದ್ದಾರೆ. ಇಲ್ಲಿ ಐದು ರತ್ನವೆಂದರೆ ಪಂಚೇಂದ್ರಿಯಗಳೆಂದು ಅರ್ಥೈಸಿಕೊಳ್ಳಬೇಕಾಗುತ್ತದೆ.  ಒಂದು ಮಾಣಿಕ್ಯವೆಂದರೆ ಮನಸ್ಸು ಎಂಬ ಅರ್ಥ ಸೂಚಿಸುತ್ತದೆ. ಆ ಮನಸ್ಸನ್ನೆ ಮಾಣಿಕ್ಯದಂತೆ ಕಂಡಿದ್ದಾರೆ ಜಕ್ಕಣಯ್ಯ ಶರಣರು.

"ಆ ಮಾಣಿಕ್ಯವ ಒಂದು ಕೋಗಿಲೆ ನುಂಗಿ ಕೂಗುತಿದೆ ನೋಡಾ"
ಈ ಪಂಚೇಂದ್ರಿಯಗಳ ಚಟುವಟಿಕೆಗೆ ಮನವೆ ಮೂಲಕಾರಣವಾಗಿದೆ ಎಂದು ಅರಿತಿದ್ದ ಜಕ್ಕಣಯ್ಯ ಶರಣರು ಆ ಮನವೆಂಬ ಮಾಣಿಕ್ಯವನ್ನ ಲಿಂಗವೆಂಬ ಕೋಗಿಲೆಯಲ್ಲಿ ಐಕ್ಯಗೊಳಿಸಿ ಅಂದರೆ ಕೋಗಿಲೆಗೆ ನುಂಗಿಸಿ ಶಿವಶಿವ ಎಂದು ಕೂಗುವಂತೆ ಮಾಡಿದೆನು ನೋಡಿರಯ್ಯಾ ಎಂದು ಹೇಳುತ್ತಿದ್ದಾರೆ.

"ಆ ಕೋಗಿಲೆಯ ಒಬ್ಬ ಬೇಂಟೆಗಾರ ಕಂಡು ತಟ್ಟನೆ ಎಚ್ಚಿ ನಿರ್ವಯಲಾದ ವಿಚಿತ್ರವ ನೋಡಾ ಝೇಂಕಾರ ನಿಜಲಿಂಗಪ್ರಭುವೆ."
ಶಿವಶಿವ ಎಂದು ಜಪಿಸುತ್ತಿರುವ ಮನವನ್ನ ಒಬ್ಬ ಬೇಟೆಗಾರ ನೋಡಿ ತಕ್ಷಣವೆ ಕತ್ತರಸಿ ಬಯಲಾದ ಆಶ್ಚರ್ಯವ ಕಾಣಿರಯ್ಯ ಎಂದು ತಮ್ಮ ಪ್ರಿಯದೇವರಾದ ಝೇಂಕಾರ ನಿಜಲಿಂಗಪ್ರಭುವಿಗೆ ಹೇಳಿಕೊಂಡಿದ್ದಾರೆ. ಲಿಂಗವೆಂಬ ಕೋಗಿಲೆಯನ ಬೇಟೆಯಾಡಿದ ಬೇಟೆಗಾರ ಮತ್ಯಾರು ಅಲ್ಲ ಆ ಲಿಂಗವೆಂಬ ಅರಿವು ಮೂಡಲು ಅಂಗಲಿಂಗ ಸಮರಸಗೊಂಡು ಅಲ್ಲಿ ಅಂಗವೆ ಇಲ್ಲವಾಗಿ ಕೇವಲ ಲಿಂಗವೆಂಬುದೊಂದೆ ಉಳಿಯಲು ಅಲ್ಲಿ ಅಂಗವು ಬಯಲುರೂಪಗೊಂಡು ನಿರವಯವಾಗಿತ್ತು. ಇದನ್ನು ಸಾಧಿಸಿದ ಜಕ್ಕಣಯ್ಯ ಶರಣರಿಗೆ ವಿಚಿತ್ರವೆಂಬಂತೆ ಕಂಡಿದೆ. ಇದರಿಂದ ನಾವುಗಳು ತಿಳಿದುಕೊಳ್ಳಬೇಕಾದ ಮುಖ್ಯ ಅಂಶವೆಂದರೆ ನಾವು ಕೂಡ ಮನಸ್ಸು ಮಾಡಿ ಶಿವಯೋಗ ಸಾಧಿಸಿದರೆ ಜಕ್ಕಣಯ್ಯ ಶರಣರ ರೀತಿಯಲ್ಲಿ ವಿಚಿತ್ರ ಆಶ್ಚರ್ಯವು ಕಾಣಬಹುದು. ಸದ್ಗತಿ ಹೊಂದಲು ಕಾಡು ನಾಡು ಅವರಿವರು ಬೇಕೆಂಬುದಿಲ್ಲ ಇಲ್ಲಿ, ನಾವು ಮನಸ್ಸು ಮಾಡಬೇಕು ಅಷ್ಟೆ. ನಮ್ಮೆಲ್ಲಾ ಬದುಕಿಗೆ ಮನಸ್ಸೆ ಕಾರಣವೆಂಬುದು ಯಾರು ಮರೆಯಬಾರದು. ಮಂಗನಂತಿರುವ ಮನವನ್ನು ಮಹಾಲಿಂಗವನ್ನಾಗಿ ಮಾಡುವುದು ನಮ್ಮ ಕೈಯ್ಯಲ್ಲಿದೆ.

ಬಸವಬೆಳಗಿನ ಶರಣು ಶರಣಾರ್ಥಿ.

Wednesday, 19 July 2017

‘ಮಾತೃದೇವೋ ಭವ| ಪಿತೃದೇವೋ ಭವ|’, ಎಂದರೆ ‘ತಾಯಿ–ತಂದೆಯರು ದೇವರಿಗೆ ಸಮಾನವಾಗಿದ್ದಾರೆ.’ ಇದು ನಮ್ಮ ಮಹಾನ ಹಿಂದೂ ಸಂಸ್ಕೃತಿಯ ಶಿಕ್ಷಣವಾಗಿದೆ. ‘ತಂದೆ–ತಾಯಿ ಮತ್ತು ಗುರುಗಳ ಸೇವೆ ಮಾಡುವುದೆಂದರೆ ಎಲ್ಲಕ್ಕಿಂತ ಉತ್ತಮ ತಪಶ್ಚರ್ಯವೇ ಆಗಿದೆ’, ಎಂದು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ. ತಂದೆ–ತಾಯಿಯರ ಮಹತ್ವವನ್ನು ಶಬ್ದಗಳಲ್ಲಿ ಹೇಳುವುದು ಕಠಿಣವಿದೆ. ನಮಗೆ ಅಜ್ಜ–ಅಜ್ಜಿ, ಚಿಕ್ಕಪ್ಪ–ಚಿಕ್ಕಮ್ಮ, ಮಾವ–ಅತ್ತೆ ಇಂತಹ ಅಸಂಖ್ಯಾತ ಸಂಬಂಧಿಕರು ಇರುತ್ತಾರೆ. ಆದ�

'ಮಾತೃದೇವೋ ಭವ|

ಪಿತೃದೇವೋ ಭವ|',

ಎಂದರೆ 'ತಾಯಿ–ತಂದೆಯರು ದೇವರಿಗೆ ಸಮಾನವಾಗಿದ್ದಾರೆ.' ಇದು ನಮ್ಮ ಮಹಾನ ಹಿಂದೂ ಸಂಸ್ಕೃತಿಯ ಶಿಕ್ಷಣವಾಗಿದೆ. 'ತಂದೆ–ತಾಯಿ ಮತ್ತು ಗುರುಗಳ ಸೇವೆ ಮಾಡುವುದೆಂದರೆ ಎಲ್ಲಕ್ಕಿಂತ ಉತ್ತಮ ತಪಶ್ಚರ್ಯವೇ ಆಗಿದೆ', ಎಂದು ಧರ್ಮಶಾಸ್ತ್ರದಲ್ಲಿ ಹೇಳಲಾಗಿದೆ. ತಂದೆ–ತಾಯಿಯರ ಮಹತ್ವವನ್ನು ಶಬ್ದಗಳಲ್ಲಿ ಹೇಳುವುದು ಕಠಿಣವಿದೆ. ನಮಗೆ ಅಜ್ಜ–ಅಜ್ಜಿ, ಚಿಕ್ಕಪ್ಪ–ಚಿಕ್ಕಮ್ಮ, ಮಾವ–ಅತ್ತೆ ಇಂತಹ ಅಸಂಖ್ಯಾತ ಸಂಬಂಧಿಕರು ಇರುತ್ತಾರೆ. ಆದರೆ ನಮಗೆ ತಾಯಿ–ತಂದೆಯರ ಸಂಬಂಧದಷ್ಟು ಇತರರ ಸಂಬಂಧವು ಹಿಡಿಸುವುದಿಲ್ಲ. ಸರ್ವ ಶ್ರೇಷ್ಠವಾದ ಹಿಂದೂ ಸಂಸ್ಕೃತಿಯಲ್ಲಿ ತಾಯಿ–ತಂದೆಯರಿಗೆ ತುಂಬಾ ಮಹತ್ವದ ಸ್ಥಾನವನ್ನು ನೀಡಲಾಗುತ್ತದೆ. ತಂದೆ–ತಾಯಿಯ ಸೇವೆ ಹೇಗೆ ಮಾಡಬೇಕು? ಅವರ ಆಜ್ಞಾಪಾಲನೆಯನ್ನು ಏಕೆ ಮಾಡಬೇಕು? ಇವುಗಳನ್ನು ಬಿಂಬಿಸುವ ಅನೇಕ ಉದಾಹರಣೆಗಳನ್ನು ನಾವು ಇತಿಹಾಸ–ಪುರಾಣಗಳಲ್ಲಿ ಓದಿದ್ದೇವೆ. ಪ್ರಭು ಶ್ರೀರಾಮ, ಶ್ರವಣ ಕುಮಾರ, ಛತ್ರಪತಿ ಶಿವಾಜಿ ಮಹಾರಾಜ, ಭಕ್ತ ಪುಂಡಲೀಕ ಮುಂತಾದವರ ಉದಾಹರಣೆಗಳಿವೆ.



ತಾಯಿ-ತಂದೆಯ ಮಹತ್ವ

1)ಏನನ್ನಾದರೂ ಮರೆ. ಆದರೆ ತಂದೆ-ತಾಯಿಯರನ್ನು ಮಾತ್ರ ಮರೆಯಬೇಡ

2)ಭೂಮಿಗಿಂತ ದೊಡ್ಡವರು ತಾಯಿ, ಬಾನಿಗಿಂತ ದೊಡ್ಡವರು ತಂದೆ. ಹೆತ್ತು ಹೊತ್ತು ಬೆಳೆಸಿದ ತಂದೆ-ತಾಯಿರ ಮುಂದೆ ಬೇರೆಲ್ಲವೂ ಅಲ್ವ

3)ಪುಣ್ಯ ಸಂಪಾದನೆಗೆ ಪೂಜೆ ಮಾಡುವುದಲ್ಲ ನದಿಯಲ್ಲಿ ಸ್ನಾನ ಮಾಡುವುದೂ ಅಲ್ಲ ತಂದೆ-ತಾಯಿಯರ ಕಣ್ಣಲ್ಲಿ  ಎಂದಿಗೂ ನೀರುತರಿಸಬಾರದು

4)ತಮ್ಮ ಪಾಲಿನ ತುತ್ತನ್ನು ನಿಮಗೆ ತಿನ್ನಿಸಿ ದೊಡ್ಡವರನ್ನಾಗಿ ಮಾಡಿದ್ದಾರೆ ಈ ಅಮೃತ ನೀಡಿದವರ ವಿಷ ಕಕ್ಕ ಬೇಡಿ

5)ನಿಮ್ಮ ಶರಿರದ ಚರ್ಮದಿಂದ ಚಪ್ಪಲಿಗಳನ್ನು ಮಾಡಿ ತೋರಿಸಿದರು ತಂದೆ ತಾಯಿಯರ ಋಣದಿಂದ ಮುಕ್ತರಾಗುವುದು ಸಾಧ್ಯವಿಲ್ಲ

6)ನಿಮ್ಮನ್ನು ಬಹಳವಾಗಿ ಪ್ರೀತಿಸಿದ್ದಾರೆ, ನಿಮ್ಮ ಸಕಲ ಅವಶ್ಯಕತೆಗಳನ್ನು ಪೂರೈಸಿದ್ದಾರೆ. ಈ ರೀತಿ ಪ್ರೀತಿಸಿದವರನ್ನು ಸದಾ ಕಾಲ ಪ್ರೀತಿಸಿ

7)ನೀವು ಲಕ್ಷ ಕೋಟಿಗಳನ್ನು ಸಂಪಾದಿಸುತದತಿರಬಹುದು, ಆದರೆ ತಂದೆ ತಾಯಿಯರು ಸಂತೋಷದಿಂದಿರದಿದ್ದರೆ ನಿಮ್ಮ ಸಂಪತ್ತು ಕಸಕ್ಕೆ ಸಮ

8)ತೇವಾಂಶದ ಸ್ಥಳದಲ್ಲಿ ತಾವು ಮಲಗಿ ಒಣಗಿರುವ ಜಾಗದಲ್ಲಿ ನಿಮ್ಮನ್ನು ಮಲಗಿಸಿದ್ದಾರೆ ಇಂತ ಅಮೂಲ್ಯರಾದವರ ಕಣ್ಣುಗಳನ್ನು ಅಪ್ಪಿ ತಪ್ಪಿಯೂ ತೇವ ಮಾಡಬೇಡಿ

9)ನಿಮ್ಮ ಬದುಕಿನ ದಾರಿಯಲ್ಲಿ ಅವರು ಪ್ರೀತಿಯಿಂದ ಹೂಗಳನ್ನು ಹಾಸಿದ್ದದಾರೆ, ಈ ರೀತಿ ಪ್ರೀತಿಸುವವರ ದಾರಿಯಲ್ಲಿ ನೀವು ಎಂದಿಗೂ ಮುಳ್ಳಾಗಬೇಡಿ

10)ಹಣವಿದ್ದರೆ ಜಗತ್ತಿನಲ್ಲಿ ಎಲ್ಲವೂ ಸಿಗುತ್ತದೆ. ಆದರೆ ತಂದೆ-ತಾಯಿ ಸಿಗುವುದಿಲ್ಲ, ಇಂಥ ಪವಿತ್ರ ಚರಣಗಳಿಗೆ ನಮಸ್ಕರಿಸುವುದನ್ನು ಮರೆಯಬೇಡಿ

11)ನೀವು ಮಕ್ಕಳಿಂದ ಸೇವೆಯನ್ನು ಇಚ್ಚಿಸುವುದಾದರೆ ಮೊದಲು ನೀವು ಮಕ್ಕಳಾಗಿ ಸೇವೆ ಮಾಡಿ

12)"ಮಾಡಿದ್ದುಣ್ಣೋ ಮಹರಾಯ" ಎಂಬಂತೆ ಏನು ಮಾಡಿರುತ್ತೇವೆಯೋ ಅದರ ಫಲವನ್ನು ಅನಿಭವಿಸುತ್ತೇವೆ. ಈ ಲೋಕೋಕ್ತಿಗಳನ್ನು ಎಂದಿಗೂ ಮರೆಯಬೇಡಿ.



ತಾಯಿಯು ನಮ್ಮ ಬೇಕು–ಬೇಡಗಳ ಕಡೆಗೆ ಸಂಪೂರ್ಣ ಗಮನ ಹರಿಸುತ್ತಾಳೆ. ಇದೆಲ್ಲವನ್ನು ಮಾಡುತ್ತಿರುವಾಗ ಅವಳು ಎಂದೂ ತನ್ನ ಬಗ್ಗೆ ವಿಚಾರ ಮಾಡುವುದಿಲ್ಲ. ಅವಳ ಮನಸ್ಸಿನಲ್ಲಿ ಸತತ ಮಕ್ಕಳದ್ದೇ ವಿಚಾರವಿರುತ್ತದೆ. ಹಾಗೆಯೇ, ತಂದೆಯೂ ನಮ್ಮ ಎಲ್ಲ ಕರ್ತವ್ಯಗಳನ್ನು ಪೂರೈಸಲು ಮತ್ತು ಕುಟುಂಬದ ಪಾಲನೆ ಪೋಷಣೆ ಮಾಡಲು ಕಷ್ಟಪಟ್ಟು ಹಣ ಸಂಪಾದಿಸುತ್ತಾರೆ. ನಮಗೆ ಅವಶ್ಯವಿರುವುದನ್ನು ತಂದು ಕೊಡುತ್ತಾರೆ. ಇದನ್ನೆಲ್ಲ ಮಾಡುವಾಗ ಅವರು ತಮಗಿಂತ ಹೆಚ್ಚಾಗಿ ನಮ್ಮ ವಿಚಾರವನ್ನೇ ಮಾಡುತ್ತಾರೆ. ಆದರೆ ಈ ತುಲನೆಯಲ್ಲಿ ನಾವು ತಾಯಿ–ತಂದೆಯವರು ಹೇಳಿದ್ದನ್ನು ಕೇಳುತ್ತೇವೆಯೇ? ಎಂಬ ವಿಚಾರವನ್ನು ಮಾಡಬೇಕು ಮತ್ತು ಈ ದೃಷ್ಟಿಯಿಂದ ಅವರ ಆಜ್ಞಾಪಾಲನೆಯನ್ನು ಮಾಡಬೇಕು. ನಾವು ಅವರ ಸೇವೆಯನ್ನು ಎಷ್ಟೇ ಮಾಡಿದರೂ ಅವರ ಋಣವನ್ನು ತೀರಿಸಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ವರ್ತನೆಯಿಂದಲಾದರೂ ಅವರಿಗೆ ದುಃಖವಾಗದಂತೆ ನೋಡಿಕೊಳ್ಳಬೇಕು. ಅವರು ದೇವರಿಗೆ ಸಮಾನರಾಗಿರುವುದರಿಂದ ಒಂದು ವೇಳೆ ನಮ್ಮಿಂದಾಗಿ ಅವರಿಗೆ ದುಃಖವಾದರೆ ದೇವರಿಗೇ ದುಃಖಿಸಿದ ಪಾಪ ತಗಲುವುದಿಲ್ಲವೇ? ಇದಕ್ಕಾಗಿ ನಾವು ಅವರು ಹೇಳಿದ ಪ್ರತಿಯೊಂದು ಅಂಶವನ್ನು ಕೇಳಬೇಕು. ಮಾತನಾಡುವಾಗ ಗೌರವದಿಂದ ಮಾತನಾಡಬೇಕು.



ತಾಯಿ–ತಂದೆಯರು ಸಂತುಷ್ಟರಾದರೆ ಪ್ರತ್ಯಕ್ಷ ಪರಮೇಶ್ವರನೇ ಪ್ರಸನ್ನನಾಗುತ್ತಾನೆ. ಇದಕ್ಕಾಗಿ ಮಕ್ಕಳೇ, ತಾಯಿ–ತಂದೆಯ ಮಾತನ್ನು ಕೇಳಿ. ಅವರಿಗೆ ಕೆಲಸಗಳಲ್ಲಿ ಸಹಾಯ ಮಾಡಿ. ಅವರನ್ನು ದೇವರಿಗೆ ಸಮಾನರೆಂದು ತಿಳಿದು ಕೊಂಡು ಅವರ ಸೇವೆ ಮಾಡಿ ಎಂದು ಸಂಸ್ಕೃತದ ಶ್ಲೋಕದಲ್ಲಿ ಹೇಳಲಾಗಿದೆ.

Tuesday, 18 July 2017

ನಾನು

☢☢☢☢☢☢☢☢

*ನಾನು*

ನಾನು ಎಂಬುದು ಪ್ರತಿಯೊಬ್ಬ ಮನುಷ್ಯನಲ್ಲಿಯೂ ಇರುವಂಥಹದ್ದು. ನಾನೂ ಇದಕ್ಕೆ ಹೊರತಾಗಿಲ್ಲ ಯಾರಾದರೂ ನನ್ನನ್ನು ಹೊಗಳಿದರೆ ತಕ್ಷಣವೇ ಪುಳಕಗೊಳ್ಳುತ್ತೇನೆ. ಆದರೆ ಹೊರ ಪ್ರಪಂಚಕ್ಕೆ ತೋರ್ಪಡಿಸದಂತಿರುವ ಕಲೆ ಸಿದ್ಧಿಸಿಕೊಂಡಿದ್ದೇನೆ. :-)

ಹೀಗೆಯೇ ಕೆಲ ವರ್ಷಗಳ ಹಿಂದೆ ಬೇಸರವಾಗಿ ಹಾಗೆಯೇ ಬೇಸರ ಕಳೆಯಲೆಂದು ರಾಜ್ಯ ಪರ್ಯಟನೆಗೆ ಹೊರಟೆ. ಸುಮಾರು ದಿನಗಳ ಪಯಣದ ನಂತರ ಶಿವಮೊಗ್ಗ ತಲುಪಿದೆ, ಅಲ್ಲಿ ಶಿವಪ್ಪ ನಾಯಕ ಮ್ಯೂಸಿಯಂ ಸಂದರ್ಶಿಸಿದೆ.

ಅಲ್ಲಿ ಕಲಾವಿದನೊಬ್ಬನ ಪರಿಚಯವಾಯಿತು. ಆತ ನಿಜಕ್ಕೂ ಬಹಳ ಅದ್ಭುತ ಶಿಲ್ಪಿ. ಅಲ್ಲಿ ಆತನೇ ಕೆತ್ತಿದ ಅನೇಕ ಮೂರ್ತಿಗಳು ಅಲ್ಲಿ ಅನಾವರಣಗೊಂಡಿದ್ದವು. ಆ ಮೂರ್ತಿಗಳು ಅದೆಷ್ಟು ಮನಮೋಹಕವಾಗಿದ್ದವೆಂದರೆ ಅವು ನಿಜವಾಗಿಯೂ ಜೀವತಳೆದು ನಿಂತಿವೆಯೇನೋ ಎಂಬಷ್ಟು!

ನನಗೆ ನಂಬಲು ಸಾಧ್ಯವಾಗದೆ ಆಶ್ಚರ್ಯವಾಗಿ ಆತನನ್ನು ಪ್ರಶ್ನಿಸಿದೆ.

"ನಿಜವಾಗಿಯೂ ಈ ಮೂರ್ತಿಗಳನ್ನು ಕೆತ್ತಿದವರು ನೀವೇನಾ?!!"

ಆತ : " ಹೌದು ಸಾರ್ ನಾನೇ"

ನನಗೆ ಸಮಾಧಾನವಾಗಲಿಲ್ಲ

"ನಿಜವಾಗಿಯೂ ನೀವೇ ಕೆತ್ತಿದ ಶಿಲ್ಪಗಳೇ ಇವು?"

"ಹೌದು ಸಾರ್ ನಾನೇ"

ಊಹೂಂ... ನನಗೆ ಸಾಕಾಗಲಿಲ್ಲ

"ನಿಜವಾಗಿಯೂ?!!"

"ಹೌದು ಸಾರ್ ನಾನೇ" ಎಂದು ಕೈ ಎತ್ತಿದ.

ಆಗ ನನ್ನ ಗಮನ ಆತನ ಹಸ್ತದತ್ತ ಸೆಳೆಯಿತು, 

"ಎಲ್ಲಿ ನಿಮ್ಮ ಹಸ್ತ ತೋರಿಸಿ"

"ಯಾಕೆ ಸಾರ್ ಭವಿಷ್ಯ ಹೇಳ್ತೀರಾ? ನೀವು ಜ್ಯೋತೀಷಿಗಳಾ?" ಕೈ ಮುಂದೆ ಚಾಚಿದ.

"ಅಯ್ಯೋ ಹಾಗೇನೂ ಇಲ್ಲಾ ಪ ಹಾಗೇ ಕಲಿತಿದ್ದೇನೆ" ಆತನ ಹಸ್ತ ಪರಿಶೀಲಿಸಿದೆ.

"ನೋಡಿ ನಿಮ್ಮಲ್ಲಿ ಅತೀ ಅದ್ಭುತವಾದ ಪ್ರತಿಭೆ ಇದೆ ಆದರೆ..."

"ಆದರೆ ಏನು ಮುಂದೆ ಹೇಳಿ ಸಾರ್"

"ಬೇಡ ಬಿಡಿ ನಾನಿನ್ನು ಬರಲೇ" ಹೊರಡಲನುವಾದೆ.

"ಅಯ್ಯೋ ಮುಂದೆ ಹೇಳಿ ಸಾರ್ ಪ್ಲೀಸ್"

"ನೋಡಿ ನಿಮ್ಮ ವಿಷಯದಲ್ಲಿ ಮುಂದೆ ಏನಾಗುವುದೋ ಅದನ್ನು ಈಗಲೇ ತಿಳಿದುಕೊಳ್ಳುವುದು ಅಷ್ಟು ಸಮಂಜಸವೆನಿಸುತ್ತಿಲ್ಲ, ಏನಾಗುವುದೋ ಅದು ಆಗಿಯೇ ತೀರುತ್ತದೆ ಹಾಗಾಗಿ ತಾವು ಅದನ್ನು ತಿಳಿದುಕೊಳ್ಳದಿರುವುದೇ ಲೇಸು"

ನನ್ನ ಮಾತು ಆತನಿಗೆ ಕುತೂಹಲದ ಸರಕಾಯಿತು. :-)

"ಸಾರ್ ಅದೇನೇ ಆಗಿರಲಿ ನನ್ನ ಸಾವಿನ ವಿಷಯವೇ ಆಗಿರಲಿ, ನನಗೆ    ನಾಳೆಯೇ ಸಾವು ಬರಲಿ ನಾನು ಚಿಂತಿಸುವುದಿಲ್ಲ ನೀವು ಹೇಳಿ" ದುಂಬಾಲು ಬಿದ್ದ.

"ಹೌದು ನಿನಗೆ ನಾಳೆ ಮಧ್ಯಾಹ್ನ 12:30ಘಂಟೆಗೆ ಸಾವು ಬರುತ್ತದೆ"

ನಿಜಕ್ಕೂ ಆತನ ಜಂಘಾಬಲವೇ ಉಡುಗಿಹೋಯಿತು. ಒಂದು ಕ್ಷಣ ಅಲ್ಲಿಯೇ ಗರಬಡಿದವನಂತೆ ಕುಳಿತ.

"ಗೆಳೆಯಾ ನಾನು ಹೇಳಿರಲಿಲ್ಲವೇ ನನ್ನನ್ನು ಒತ್ತಾಯಪಡಿಸಿದೆ ಏಕೆ?"

"ಅಯ್ಯೋ ಇದಕ್ಕೇನಾದರೂ ಪರಿಹಾರವಿಲ್ಲವೇ" 

"ಊಹೂಂ ಸಾವಿನಿಂದ ತಪ್ಪಿಸಿಕೊಳ್ಳಲು ಮನುಷ್ಯಮಾತ್ರದವರಿಗ್ಯಾರಿಗೂ ಸಾಧ್ಯವಿಲ್ಲ"

"ಏನಾದರೊಂದು ಪರಿಹಾರ ಸೂಚಿಸಿ ಗುರುಗಳೇ" ದುಂಬಾಲು ಬಿದ್ದ.

ನನಗೆ ಆತನ ಸಂಕಟ ಅರ್ಥವಾಯಿತು. ಆತನನ್ನು ಸಮಾಧಾನ ಪಡಿಸುವ ಪರ್ಯಾಯ ಮಾರ್ಗ ಆಲೋಚಿಸಿದೆ.

"ಊಂ ಒಂದು ಮಾರ್ಗವಿದೆ"

ಆತನ ಸಂತೋಷಕ್ಕೆ ಪಾರವೇ ಇರಲಿಲ್ಲ.

"ಬೇಗ ಹೇಳಿ ಗುರೂಜಿ"

"ನಿನ್ನಲ್ಲಿ ಮನುಷ್ಯರ ಮೂರ್ತಿಗಳನ್ನು ಕೆತ್ತುವ ಅದ್ಭುತವಾದ ಕಲೆಯಿದೆ, ನೀನು ನಿನ್ನ ಹಾಗೆಯೇ ಇರುವ ಒಂಭತ್ತು ಮೂರ್ತಿಗಳನ್ನು ಕೆತ್ತಿ ಸಾಲಾಗಿ ನಿಲ್ಲಿಸಿ ಮಧ್ಯೆ ನೀನೂ ನಿಲ್ಲಬೇಕು. ನಾಳೆ ಹನ್ನೆರಡೂ ವರೆ ಘಂಟೆಗೆ ಯಮ ಬರುತ್ತಾನೆ ನೀನು ಸ್ವಲ್ಪವೂ ಮಿಸುಕ ಬಾರದು, ನೆನಪಿರಲಿ ಮಿಸುಕಿದರೆ ನಿನಗೆ ಸಾವು."

"ಆಯ್ತು ಗುರೂಜಿ" ಕಾಲಿಗೆ ಬಿದ್ದೆದ್ದು ಮೂರ್ತಿಕೆತ್ತನೆ ಶುರುವಿಟ್ಟುಕೊಂಡ.

ಸಾಯಂಕಾಲದ ಒಳಗಾಗಿ ಆತನಂತೆಯೇ ಇರುವ ಒಂಭತ್ತು ಮೂರ್ತಿಗಳು ಸಿದ್ಧಗೊಂಡವು! ಎಷ್ಟು ಅದ್ಭುತವಾದ ಶಿಲ್ಪಗಳೆಂದರೆ ಸ್ರುಷ್ಟಿಕರ್ತ ಸಾಕ್ಷಾತ್ ಬ್ರಹ್ಮದೇವನೇ ಬಂದರೂ ಗುರುತು ಸಿಗಲಾರದಷ್ಟು!!

"ಸರಿ ಈಗ ಒಂದು ಘಂಟೆ ಮಿಸುಕಾಡದಂತೆ ನಿಲ್ಲುವುದನ್ನು ಅಭ್ಯಾಸ ಶುರುಮಾಡು"

ಕಠೋರವಾದ ಅಭ್ಯಾಸ ಶುರುವಾಯಿತು. ಆತ ಎಷ್ಟು ಚೆನ್ನಾಗಿ ಅಭ್ಯಸಿಸಿದನೆಂದರೆ ಅಕಸ್ಮಾತ್ ಆತನು ಕೆತ್ತಿದ ಮೂರ್ತಿಗಳಾದರೂ ಮಿಸುಕಬಹುದೇನೋ ಆದರೆ ಈತನು ಮಿಸುಕುತ್ತಿರಲಿಲ್ಲ. :-) ಸಾವನ್ನು ಗೆಲ್ಲಬೇಕಲ್ಲ?

ಮರುದಿನ ಮಧ್ಯಾಹ್ನ. ಸಮಯ 12:30. 

ಯಮ ಸರಿಯಾಗಿ ಹಾಜರಾಗುತ್ತಾನೆ. ಆತನಿಗೆ ಆಶ್ಚರ್ಯ! ಅಲ್ಲಿ ಈತನಂತೆಯೇ ಹತ್ತು ಜನರಿದ್ದಾರೆ!! 

ಆತನ ಇತಿಹಾಸವನ್ನು ಕೆದಕಿದ ಯಮನಿಗೆ ನಿಧಾನವಾಗಿ ಪರಿಸ್ಥಿತಿಯ ಅರಿವಾಯಿತು. ಈ ಹಿಂದೆ ಇವೆಲ್ಲವುಗಳ ಅನುಭವವಿದ್ದ ಯಮ ನಸುನಗುತ್ತ ಉದ್ಘರಿಸಿದ.

" ವಾಹ್ ಭಲೇ... ಅದ್ಭುತ! ಸುಂದರ, ಅತೀ ಸುಂದರ ಇಂತಹ ಅತ್ಯಂತ ಮನಮೋಹಕವಾದ ಶಿಲ್ಪಗಳನ್ನು ಕತ್ತಿದಂಥಹ ಶಿಲ್ಪಿಯಾದರೂ ಯಾರು?!!'

ಆ ಓಂಭತ್ತು ಮೂರ್ತಿಗಳ ಮಧ್ಯೆ ಉಸಿರಾಡದೆ ನಿಂತಿದ್ದ ಶಿಲ್ಪಿ ಕೈ ಎತ್ತಿಹೇಳಿದ

*"ನಾನು"*

*"ನಾನು" ಎಂಬ ಅಂಹಕಾರದಿಂದ ಜೀವ ಕಳೆದುಕೊಂಡ*

ತೆಲುಗಿನ ಮಹಾಕವಿ, ಕ್ರಾಂತಿಕಾರಿ ಕವಿ, ಶ್ರೀಶ್ರೀಯವರ ಒಂದು ಕವಿತೆ

*ತೆಲುಗಿನ ಮಹಾಕವಿ, ಕ್ರಾಂತಿಕಾರಿ ಕವಿ, ಶ್ರೀಶ್ರೀಯವರ ಒಂದು ಕವಿತೆ*

ಸಾಧ್ಯವಾದರೆ ಓಡು
ಆಗಲಿಲ್ಲವಾದರೆ ನಡೆ
ಅದೂ ಸಾಧ್ಯವಾಗದಿರೆ
ಉರುಳಿ ಕೊಂಡು ಹೋಗು ಅಷ್ಟೇ!

ಆದರೆ ಕದಲದೇ 
ಬಿದ್ದಿರಬೇಡ ಒಂದೇ ಕಡೆ

ಕೆಲಸ ಸಿಗಲಿಲ್ಲವೆಂದು,
ವ್ಯಾಪಾರ ನಷ್ಟವಾಯಿತೆಂದು
ಗೆಳೆಯನೊಬ್ಬ ಮೋಸಮಾಡಿದನೆಂದು,
ಪ್ರೀತಿಸಿದವಳು
ಕೈಬಿಟ್ಟಳೆಂದು!!

ಹಾಗೆ ಇದ್ದರೆ ಹೇಗೆ..?
ದಾಹಕ್ಕೆ ಬಾರದ
ಸಮುದ್ರದ ಅಲೆಗಳು ಕೂಡಾ
ಕುಣಿದು ಕುಪ್ಪಳಿಸುತ್ತವೆ ನೋಡು!

ಮನಸು ಮಾಡಿದರೇ...
ನಿನ್ನ ಹಣೆಬರಹ ಇಷ್ಟೇ 
ಅಂದವರೂ ಸಹ...
ನಿನ್ನ ಮುಂದೆ ತಲೆ ತಗ್ಗಿಸುವ 
ತಾಕತ್ತು ನಿನ್ನಲ್ಲಿದೆ

ಅಂತದ್ದರಲ್ಲಿ ಈ ಪುಟ್ಟ ಕಷ್ಟ ಕೋಟಲೆಗೆ ತಲೆ ಬಾಗಿದರೆ ಹೇಗೆ?

ಸೃಷ್ಟಿ ಚಲನಶೀಲ
ಯಾವುದೂ ನಿಲ್ಲಬಾರದು

ಹರಿಯುವ ನದಿ
ಬೀಸುವ ಗಾಳಿ
ತೂಗುವ ಮರ
ಹುಟ್ಟೋ ಸೂರ್ಯ
ಅಂದುಕೊಂಡಿದ್ದನ್ನು ಸಾಧಿಸಬೇಕೆಂದು 
ನಿನ್ನಲ್ಲಿ ಛಲದಿಂದ ಹರಿಯುವ ರುಧಿರ ಸಹ

ಯಾವುದೂ  ನಿಲ್ಲಬಾರದು.
ಏಳು... ಎದ್ದೇಳು
ಹೊರಡು...
ನಿನ್ನನ್ನು ಅಲಗಾಡದಂತೆ 
ಮಾಡಿದ ಆ ಮಾನಸಿಕ ‌ಸಂಕೋಲೆಗಳನ್ನು ಬೇಧಿಸು, 
ಬಿದ್ದ ಜಾಗದಿಂದಲೇ
ಓಟ ಶುರು ಮಾಡು

ನೀನು ಮಲಗಿದ ಹಾಸಿಗೆ 
ನಿನ್ನನ್ನು ಅಹಸ್ಯಪಡುವ ಮುನ್ನ 
ಅಲಸ್ಯವನ್ನು ಬಿಡು

ಕನ್ನಡಿ ನಿನ್ನನ್ನು ಪ್ರಶ್ನಿಸುವ 
ಮುನ್ನ ಉತ್ತರ ಹುಡುಕು

ನೆರಳು ನಿನ್ನನ್ನು ಬಿಡುವ 
ಮುನ್ನ ಬೆಳಕಿಗೆ ಬಾ

ಮತ್ತೆ ಹೇಳುತ್ತಿದ್ದೇನೆ...
ಕಣ್ಣೀರು ಸುರಿಸುವುದರಿಂದ
ಅದು ಸಾಧ್ಯವಿಲ್ಲ! 
ಬೆವರು ಸುರಿಸುವುದರಿಂದ 
ಮಾತ್ರ ಚರಿತ್ರೆ 
ಸೃಷ್ಟಿಸಬಹುದೆಂದು 
ತಿಳಿದುಕೋ...

ಓದಿದರೆ ಇವು ಪದಗಳಷ್ಟೇ...
ಆದರೆ ಆಚರಿಸಿದಾಗ
ಅಸ್ತ್ರಗಳು..!!!!!
ಮಹಾ ಶಸ್ತ್ರಗಳು!!!!!!!

*ಯಾರು ನಮ್ಮ ಶ್ರಮವನ್ನು ಗಮನಿಸುವುದಿಲ್ಲ..*
*ಯಾರು ನಮ್ಮ ನ್ಯಾಯವನ್ನು ಗಮನಿಸುವುದಿಲ್ಲ...*
*ಯಾರು ನಮ್ಮ ನೋವನ್ನು ಗಮನಿಸುವುದಿಲ್ಲ...*
                  *ಆದರೆ*
*"ಎಲ್ಲರೂ ನಾವು ಮಾಡುವ ತಪ್ಪನ್ನು ಗಮನಿಸುತ್ತಾರೆ🖖🙃"*
                  *ಎಚ್ಚರ*🀄
*"ಗೆದ್ದರೆ ಕಾಲು ಹಿಡಿಯುತ್ತಾರೆ, ಬಿದ್ದರೆ ಕಾಲು ಎಳೆಯುತ್ತಾರೆ"*

ಸುಳಿದಡೆ ಒಡಲಿಲ್ಲ ನಿಂದಡೆ ನೆಳಲಿಲ್ಲ

ಸುಳಿದಡೆ ಒಡಲಿಲ್ಲ ನಿಂದಡೆ ನೆಳಲಿಲ್ಲ
ನಡೆದಡೆ ಗಮನವಿಲ್ಲ ನುಡಿದಡೆ ಶಬ್ದವಿಲ್ಲ ದಗ್ಧಪಟನ್ಯಾಯವಾಗಿ.
ಉಂಡಡೆ ಉಪಾಧಿಯಿಲ್ಲ ಉಣದಿದ್ದಡೆ ಕಾಂಕ್ಷೆಯಿಲ್ಲ
ಯಥಾಲಾಭಸಂತುಷ್ಟನಾಗಿ.
ಸ್ತುತಿಯಿಲ್ಲ ನಿಂದೆಯಿಲ್ಲ ನಂಟಿಲ್ಲ ಹಗೆಯಿಲ್ಲ
ಅರಿವಿಲ್ಲ ಮರಹಿಲ್ಲ ನಾನೆಂಬ ನೆನಹಿಲ್ಲವಾಗಿ.
ಇದಕ್ಕೆ ಶ್ರುತಿ:
ಯತ್ಪ್ರಾಣೇ ಲಿಂಗಸಂಧಾನಂ ತಲ್ಲಿಂಗಂ ಪ್ರಾಣಸಂಯುತಂ
ಪ್ರಾಣಲಿಂಗದ್ವಯೋರ್ಭೇದೋ ನ ಭೇದಶ್ಚ ನ ಸಂಶಯಃ
ದಗ್ಧಾಂಬರಂ ಹಿ ಕರ್ಮಾಣಿ ಚೇಂದ್ರಿಯಾಣಿ ಮನೋ ವಚಃ
ಭಾವಸದ್ಭಾವನಿರ್ವಾಣಃ ಪರೇ ಯಸ್ಯ ವಿಲೀಯತೇ
ಇಂತೆಂದುದಾಗಿ,
ಸೌರಾಷ್ಟ್ರ ಸೋಮೇಶ್ವರನ ಶರಣರು ಲಿಂಗಪ್ರಾಣಿಗಳಾಗಿಅಂಗವ ಮರೆಗೊಂಡು ಎಂತಿರ್ದಡಂ ಎಂತು ನಡೆದಡಂತೆ ಸಂತ.

-ಆದಯ್ಯ

ಸುಳಿದಡೆ ಒಡಲಿಲ್ಲ ನಿಂದಡೆ ನೆಳಲಿಲ್ಲ

ಸುಳಿದಡೆ ಒಡಲಿಲ್ಲ ನಿಂದಡೆ ನೆಳಲಿಲ್ಲ
ನಡೆದಡೆ ಗಮನವಿಲ್ಲ ನುಡಿದಡೆ ಶಬ್ದವಿಲ್ಲ ದಗ್ಧಪಟನ್ಯಾಯವಾಗಿ.
ಉಂಡಡೆ ಉಪಾಧಿಯಿಲ್ಲ ಉಣದಿದ್ದಡೆ ಕಾಂಕ್ಷೆಯಿಲ್ಲ
ಯಥಾಲಾಭಸಂತುಷ್ಟನಾಗಿ.
ಸ್ತುತಿಯಿಲ್ಲ ನಿಂದೆಯಿಲ್ಲ ನಂಟಿಲ್ಲ ಹಗೆಯಿಲ್ಲ
ಅರಿವಿಲ್ಲ ಮರಹಿಲ್ಲ ನಾನೆಂಬ ನೆನಹಿಲ್ಲವಾಗಿ.
ಇದಕ್ಕೆ ಶ್ರುತಿ:
ಯತ್ಪ್ರಾಣೇ ಲಿಂಗಸಂಧಾನಂ ತಲ್ಲಿಂಗಂ ಪ್ರಾಣಸಂಯುತಂ
ಪ್ರಾಣಲಿಂಗದ್ವಯೋರ್ಭೇದೋ ನ ಭೇದಶ್ಚ ನ ಸಂಶಯಃ
ದಗ್ಧಾಂಬರಂ ಹಿ ಕರ್ಮಾಣಿ ಚೇಂದ್ರಿಯಾಣಿ ಮನೋ ವಚಃ
ಭಾವಸದ್ಭಾವನಿರ್ವಾಣಃ ಪರೇ ಯಸ್ಯ ವಿಲೀಯತೇ
ಇಂತೆಂದುದಾಗಿ,
ಸೌರಾಷ್ಟ್ರ ಸೋಮೇಶ್ವರನ ಶರಣರು ಲಿಂಗಪ್ರಾಣಿಗಳಾಗಿಅಂಗವ ಮರೆಗೊಂಡು ಎಂತಿರ್ದಡಂ ಎಂತು ನಡೆದಡಂತೆ ಸಂತ.

-ಆದಯ್ಯ
--
With Regards-
Siddu 

Please consider the environment before printing this e-mail

Monday, 17 July 2017

ಉತ್ತಮೇಚ ಕ್ಷಣಂ ಕೋಪೋ

*ಉತ್ತಮೇಚ ಕ್ಷಣಂ ಕೋಪೋ*
*ಮಧ್ಯಮೇ ಘಟಿಕಾದ್ವಯಂ*
*ಅಧಮೇಸ್ಯಾತ್ ಅಹೋರಾತ್ರಂ*
*ಪಾಪಿಷ್ಠೇ ಮರಣಾಂತಕಃ !*

*ನಮಗೆ ಕೋಪ ಬರುವುದಿಲ್ಲವೆಂದರೆ ನಾವು ಶಕ್ತಿವಂತರಲ್ಲ ಎಂದು ಕೆಲವರು ತಿಳಿದುಕೊಳ್ಳುತ್ತಾರೆ!*
*ಉತ್ತಮರಲ್ಲಿ ಕೋಪ ಕ್ಷಣಮಾತ್ರವಿರುತ್ತದೆ!*
*ಮಧ್ಯಮರಲ್ಲಿ ಎರಡು ಘಳಿಗೆ ಇರುತ್ತದೆ!*
*ಅಧಮರಲ್ಲಿ ಅಹೋರಾತ್ರಿ ಕೋಪ ಇರುತ್ತದೆ!*
*ಪಾಪಿಷ್ಠರಲ್ಲಿ ಮಾತ್ರ ಸಾಯುವ ತನಕ ಕೋಪ ಇರುತ್ತದೆ!*

*ನಾವ್ಯಾರು ಎಂದು ನಾವೇ ನಿರ್ಧರಿಸಿಕೊಳ್ಳೋಣ!*

Sunday, 16 July 2017

ಕೋಪದಿಂದ ಮಾತನಾಡಿದರೆ "ಗುಣ" ವನ್ನು ಕಳೆದುಕೊಳ್ಳುತ್ತೇವೆ.

          ಕೋಪದಿಂದ ಮಾತನಾಡಿದರೆ 
          "ಗುಣ" ವನ್ನು ಕಳೆದುಕೊಳ್ಳುತ್ತೇವೆ.
            
          ಹೆಚ್ಚಾಗಿ ಮಾತನಾಡಿದರೆ 
          "ಶಾಂತಿ"ಯನ್ನು ಕಳೆದುಕೊಳ್ಳುತ್ತೇವೆ.

          ಅನಗತ್ಯವಾಗಿ ಮಾತನಾಡಿದರೆ 
          "ಕೆಲಸ" ವನ್ನು  ಕಳೆದುಕೊಳ್ಳುತ್ತೇವೆ.

          ಅಹಂಕಾರದಿಂದ ಮಾತನಾಡಿದರೆ
          "ಪ್ರೀತಿ" ಯನ್ನು ಕಳೆದುಕೊಳ್ಳುತ್ತೇವೆ.
 
           ಸುಳ್ಳು ಸುಳ್ಳು ಮಾತನಾಡಿದರೆ
           "ಹೆಸರು" ಕಳೆದುಕೊಳ್ಳುತ್ತೇವೆ.

           ವೇಗವಾಗಿ ಮಾತನಾಡಿದರೆ 
           "ಅರ್ಥ" ವನ್ನು ಕಳೆದುಕೊಳ್ಳುತ್ತೇವೆ.

            ಪ್ರೀತಿಯಿಂದ ಮಾತನಾಡಿದರೆ
            "ಎಲ್ಲವನ್ನು" ಗಳಿಸಿಕೊಳ್ಳುತ್ತೇವೆ 

ಬಟ್ಟೆ ಹೊಲಿಯುವವರ ಬಳಿ ಅತಿ ಮುಖ್ಯವಾದ ಎರಡು ಉಪಕರಣಗಳಿರಲೇಬೇಕು.

ಬಟ್ಟೆ ಹೊಲಿಯುವವರ ಬಳಿ ಅತಿ ಮುಖ್ಯವಾದ ಎರಡು ಉಪಕರಣಗಳಿರಲೇಬೇಕು.

ಒಂದು ಸೂಜಿ, ಇನ್ನೊಂದು ಕತ್ತರಿ. ಇವೆರಡೂ ಜೊತೆಯಲ್ಲೇ ಇರುವುದಾದರೂ ಇವೆರಡರ ಸ್ವಭಾವ ಮಾತ್ರ ವಿರುದ್ಧ.

ಕತ್ತರಿ ಬಟ್ಟೆಯನ್ನು ಕತ್ತರಿಸಿ ತುಂಡು ತುಂಡು ಮಾಡುತ್ತದೆ. ಆದರೆ ಸೂಜಿ ಆ ತುಂಡುಗಳನ್ನು ಜೋಡಿಸಿ ಒಂದುಗೂಡಿಸುತ್ತದೆ. 

ಕತ್ತರಿಗೆ ಹೋಲಿಸಿದರೆ ಸೂಜಿ ಅತಿ ಚಿಕ್ಕ ವಸ್ತು. ಸಾಮಾಜಿಕವಾಗಿ ಇದರಿಂದ ಒಂದು ನೀತಿ ಸಿಕ್ಕುತ್ತದೆ.

ಕೆಲವರು ಕತ್ತರಿಯಂತೆ ತಮಗೆ ಬೇಡವಾದುದನ್ನು ಕತ್ತರಿಸಿ ವಿಭಜಿಸುತ್ತಾರೆ. 

ಅದು ಸಮಾಜವಾಗಬಹುದು. ಸಂಸ್ಥೆಯಾಗಬಹುದು. ಸಂಸಾರವೇ ಆಗಬಹುದು. ಸ್ನೇಹವೂ ಆಗಬಹುದು. 


ಕತ್ತರಿಯ ಹರಿತಕ್ಕೆ ಒಳಗಾದವರು ದುಃಖಿಸುತ್ತಲೇ ಮತ್ತೆ ಮತ್ತೆ ತುಂಡಾಗುತ್ತಲೇ ಇರುತ್ತಾರೆ. 

ಆದರೆ ಸೂಜಿ ಚಿಕ್ಕದಾದರೂ ಕೆಲಸ ನಿಧಾನವಾದರೂ ತುಂಡಾದುದನ್ನು ಹೊಲಿದು ಜೋಡಿಸುವಂತೆ, ಸಜ್ಜನರು ವಿಭಜಿತರನ್ನು ಒಂದುಗೂಡಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ. 

ಆದುದರಿಂದ ನಾವು ಸೂಜಿಯಂತಾಗಬೇಕು. ಕತ್ತರಿಯಂತಾಗಬಾರದು. 

ಇದೇ ಸಾಮಾಜಿಕ ನೀತಿ. 

ಇದನ್ನು ತಿಳಿದು ಬದುಕೋಣ. 

ಮನುಷ್ಯನದು ಸ್ವಂತದ್ದು ಏನಿದೆ? 

ಜನ್ಮ ಬೇರೆಯವರು ನೀಡಿದ್ದಾರೆ ..!
ಹೆಸರು ಬೇರೆಯವರು ಇಟ್ಟಿದ್ದಾರೆ.
ಶಿಕ್ಷಣ ಬೇರೆಯವರು ಕಲಿಸಿದ್ದಾರೆ..
ಕೆಲಸವು ಬೇರೆಯವರು ಕೊಟ್ಟಿದ್ದಾರೆ..
ನಾಳೆ ಸ್ಮಶಾನಕ್ಕೆ ಬೇರೆಯವರೇ ಹೊತ್ತುಕೊಂಡು ಹೋಗುತ್ತಾರೆ..! 


ಹಾಗಾದರೆ,
ವ್ಯರ್ಥ ಅಹಂಕಾರ ಏಕೆ..?
ಯಾವಾಗಲೂ ಒಳ್ಳೆಯ ಕರ್ಮದ ಬಗ್ಗೆ ಯೋಚಿಸಬೇಕಲ್ಲವೇ...?

ಶರಣರ ಮನ ನೋಯ ನುಡಿದೆನಾಗಿ

ಶರಣರ ಮನ ನೋಯ ನುಡಿದೆನಾಗಿ,
ಹರಜನ್ಮವಳಿದು ನರಜನ್ಮಕ್ಕೆ ಬಂದೆನು.
ಹರನಟ್ಟಿದ ಬೆಸನ ಶಿರದೊಳಗಾಂತೊಡೆ,
ಗಿರಿಗಳ ಭಾರವೆನಗಾದುದಯ್ಯ.
ಚೆನ್ನಮಲ್ಲಿಕಾರ್ಜುನನ ಧರ್ಮದಿಂದ
ಸಂಸಾರ ಕರ್ಮದ ಹೊರೆಯನಿಳುಹಿ, ನಡುದೊರೆಯ ಹಾಯಿದು ಹೋದೆನು.

-ಅಕ್ಕಮಹಾದೇವಿ

ಶರಣ ಶರಣನ ಕಂಡು,

ಶರಣ ಶರಣನ ಕಂಡು,
'ಶರಣು' ಎಂದು ಕರವ ಮುಗಿವುದೆ ಭಕ್ತಿಲಕ್ಷಣ.
ಶರಣ ಶರಣನ ಕಂಡು,
ಪಾದವಿಡಿದು ವಂದಿಸುವುದೆ ಭಕ್ತಿಲಕ್ಷಣ.
ಶರಣ ಚರಣವ ಪಿಡಿಯದೆ
ಕಂಡೂ ಕಾಣದೆ ಪೋದನಾದಡೆ
ಕೂಡಲಚೆನ್ನಸಂಗನ ಶರಣರು ಮನ್ನಿಸರಯ್ಯಾ.

-ಚೆನ್ನಬಸವಣ್ಣ

ನೀರಿಂಗೆ ನೈದಿಲೇ ಶೃಂಗಾರ

ನೀರಿಂಗೆ ನೈದಿಲೇ ಶೃಂಗಾರ, ಊರಿಂಗೆ ಆರವೆಯೇ ಶೃಂಗಾರ, ಸಮುದ್ರಕ್ಕೆ ತೆರೆಯೇ ಶೃಂಗಾರ ನಾರಿಗೆ ಗುಣವೇ ಶೃಂಗಾರ ಗಗನಕ್ಕೆ ಚಂದ್ರಮನೇ ಶೃಂಗಾರ ನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೇ ಶೃಂಗಾರ.

Saturday, 15 July 2017

ಶರಣ ಸಂಬಂಧವನರಿದ ಬಳಿಕ

ಶರಣ ಸಂಬಂಧವನರಿದ ಬಳಿಕ
ಮರಳಿ ಭವಿಯ ಬೆರಸಲಾಗದು.
ಬ್ರಹ್ಮೇತಿ ಭ್ರೂಣಹತ್ಯ ವೈತರಣಿ ದುರ್ಗತಿ
ಪಂಚಮಹಾಪಾತಕದಿಂದಧಿಕ ನೋಡಾ.
ಅಳುಪಿ ಭವಿಯೊಡನುಂಡಡೆ ಭಕ್ತನಲ್ಲ
ಕೂಡಲಸಂಗಮದೇವಾ.

-ಬಸವಣ್ಣ

ಸೂರ್ಯನ ಕಿರಣಗಳು ಕೊಳಕು ಇರುವ ಜಾಗಕ್ಕೂ

*"ಸೂರ್ಯನ ಕಿರಣಗಳು ಕೊಳಕು ಇರುವ ಜಾಗಕ್ಕೂ ಹೋಗುತ್ತದೆ. ಆದರೆ ಅದು ಕೊಳಕಾಗುವುದಿಲ್ಲ...!!"*

*"ಬದುಕಿನಲ್ಲಿ ಸೂರ್ಯನ ಕಿರಣದಂತೆ ಆಗಬೇಕು ನಾವು ಯಾವ ಜಾಗಕ್ಕೆ ಹೋದರೂ ಯಾರ ಜೊತೆ ಇದ್ದರೂ ನಾವು ನಾವಾಗಿರಬೇಕು ಕೊಳಕಾಗಬಾರದು...!!!*

ಅಂಗೈಯ ಲಿಂಗವ ಕಂಗಳು ತುಂಬಿ ನೋಡಿ ಮನ ಹಾರೈಸಿದಲ್ಲಿ ಅಂಗೇಂದ್ರಿಯಂಗಳೆಲ್ಲ ಲಿಂಗೇಂದ್ರಿಯಂಗಳಾದವು

ಶರಣ ಉರಿಲಿಂಗಪೆದ್ದಿ

"ಅಂಗೈಯ ಲಿಂಗವ ಕಂಗಳು ತುಂಬಿ ನೋಡಿ ಮನ ಹಾರೈಸಿದಲ್ಲಿ
ಅಂಗೇಂದ್ರಿಯಂಗಳೆಲ್ಲ ಲಿಂಗೇಂದ್ರಿಯಂಗಳಾದವು.
ಅಂಜದಿರು ಮನವೇ, ಲಿಂಗವು ನಿನಗೆ ದೂರನೆಂದು.
ಮನೋಮಧ್ಯದೊಳಿಪ್ಪ, ಅಂಗದ ಕಂಗಳಲಿಪ್ಪ,
ಭಾವದ ಪ್ರಾಣದಲ್ಲಿಪ್ಪ.
ಅಂಗಪ್ರಾಣಭಾವ ಸರ್ವಾಂಗಲಿಂಗವಾದ ಬಳಿಕ,
ಲಿಂಗಮಧ್ಯಪ್ರಾಣ, ಪ್ರಾಣಮಧ್ಯಲಿಂಗ.
ಇದು ಕಾರಣ ಉತ್ಪತ್ತಿಸ್ಥಿತಿಲಯವುಂಟೆಂದು ಅಂಜದಿರು.
ಅಂಜಿಕೆ ಇಲ್ಲ, ಅಳುಕಿಲ್ಲ, ಬಂದುದೇ ಲಿಂಗದ ಲೀಲೆ,
ಇದ್ದುದೇ ಲಿಂಗದಾನಂದ, ಭಾವಲೀಯವಾದುದೇ ಲಿಂಗನಿರವಯವು.
ಇದು ಸತ್ಯ, ಶಿವ ಬಲ್ಲ, ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ."

ಇರುವುದೊಂದೇ ಜೀವನ ಸಿಗುವುದು ಕೆಲವೇ ದಿನ ತಿಳಿಯದೇ

*ಇರುವುದೊಂದೇ ಜೀವನ ಸಿಗುವುದು ಕೆಲವೇ ದಿನ ತಿಳಿಯದೇ ಕಳೆವ ಬಾಲ್ಯ ಗೊತ್ತಿಲ್ಲದೆ ಜಾರುವ ಹರಯ ಕರೆಯದೆ ಬರುವ ಮುದಿತನ ಎಲ್ಲವನ್ನು ಅನುಭವಿಸುತ್ತಾ.. ಬಾಳುವುದೇ ಬದುಕು.*

ತಾನು ಸುಖಿಯಾದಡೆ ತನ್ನ ಲಿಂಗಮೆಚ್ಚ ನಡೆವುದು.

ತಾನು ಸುಖಿಯಾದಡೆ ತನ್ನ ಲಿಂಗಮೆಚ್ಚ ನಡೆವುದು.
ತಾನು ಸುಖಿಯಾದಡೆ ತನ್ನ ಲಿಂಗಮೆಚ್ಚ ನುಡಿವುದು.
ನಿಂದೆ ಬೇಡ, ಪರನಿಂದೆ ಬೇಡ.
ಅವರಾದಡೇನು ? ಹೋದಡೇನು ?
ತಾನು ಸುಖಿಯಾದಡೆ ಸಾಕು.
ಏಕೋರಾಮೇಶ್ವರಲಿಂಗದ ನಿಜವನರಿದಡೆ,
ಬೀಗಿ ಬೆಳೆದ ರಾಜಾನ್ನದ ತೆನೆಯಂತಿರಬೇಕು, ಶರಣ.

-ಏಕೋರಾಮೇಶ್ವರ ಲಿಂಗ (*)

ಪೂರ್ವಕರ್ಮವ ಕೆಡಸಿದನೆನ್ನ ಗುರು

ಪೂರ್ವಕರ್ಮವ ಕೆಡಸಿದನೆನ್ನ ಗುರು
ಉಭಯ ಕರ್ಮವ ಬಿಡಿಸಿ ತೋರಿದ ಶರಣರ.
ಅವರಿಂದ ಬದುಕಿದೆನು.
ತೋರಿದ ಸದುಭಕ್ತರ;
ಅವರಿಂದ ಬದುಕಿದೆನು.
ನಾಚಯ್ಯಪ್ರಿಯ ಮಲ್ಲಿನಾಥಯ್ಯಾ,ಗುರುವಿಂದ ಬದುಕಿದೆನು, ನಿಮ್ಮ ಹಂಗೇನು?

-ದಶಗಣ ಸಿಂಗಿದೇವಯ್ಯ

ಬದುಕು ಕರೆದುಕೊಂಡು ಹೋದ ಕಡೆ ನೀವು ಹೋಗದೆ

🌷🌱🍇🌷🌱🍇🌷🌱🍇🌷🌱🍇🌷

*ಬದುಕು ಕರೆದುಕೊಂಡು ಹೋದ ಕಡೆ ನೀವು ಹೋಗದೆ, ನೀವು ಹೋದೆಡೆ ಬದುಕನ್ನು ಕರೆದುಕೊಂಡು ಹೋಗುವುದು ಜಾಣತನ.*
*ನಡೆದಷ್ಟು ದಾರಿ ಇದೆ, ಪಡೆದಷ್ಟು ಭಾಗ್ಯವಿದೆ ಎಂಬುದೇ ಜಗತ್ತು ನಮಗೆ ನೀಡುವ ಸಂದೇಶವಾಗಿದೆ.*
🌷🌱🍇🌷🌱🍇🌷🌱🍇🌷🌱🍇🌷

ಅಂಗಕ್ಕೆ ಆಚಾರವೆ ಆಶ್ರಯ.

ಅಂಗಕ್ಕೆ ಆಚಾರವೆ ಆಶ್ರಯ.
ಆಚಾರಕ್ಕೆ ಪ್ರಾಣವೆ ಆಶ್ರಯ.
ಪ್ರಾಣಕ್ಕೆ ಜ್ಞಾನವೆ ಆಶ್ರಯ.
ಜ್ಞಾನಕ್ಕೆ ಲಿಂಗವೆ ಆಶ್ರಯ.
ಲಿಂಗಕ್ಕೆ ಜಂಗಮವೆ ಆಶ್ರಯ.
ಇಂತೀ ಪಂಚಲಕ್ಷಣ ಪರಿಪೂರ್ಣವಾಗಿರಬಲ್ಲಡೆ
ಸದ್ಭಕ್ತನೆಂಬೆನಯ್ಯಾ,ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.

-ತೋಂಟದ ಸಿದ್ಧಲಿಂಗ ಶಿವಯೋಗಿಗಳು

ಮೇಲುಗೆಟ್ಟ ಸೀಮೆ, ತೆರಹುಗೆಟ್ಟ ಬ್ರಹ್ಮ.

ಮೇಲುಗೆಟ್ಟ ಸೀಮೆ, ತೆರಹುಗೆಟ್ಟ ಬ್ರಹ್ಮ.

ಐದಾರು ಕಣೆಯದಿಂ ಮೇಲೆ ದುರ್ಗ.
ಕಾಲಾಳು ನಾಯಕರು, ಮೇಲೆ ರಥಪಾಯಕರು,
ಆರೈದು ಓರಂತೆ ದುರ್ಗದಲ್ಲಿ.
ಧಾರುಣಿಯ ಕಳ್ಳರಿಗೆ ತಾನಂಜಿ ದುರ್ಗದೊಳು
ಓರಂತೆ ಅಡಗಿರ್ದಾತ, ಶ್ರೀಮಲ್ಲಿಕಾರ್ಜುನ.

-ಮಲ್ಲಿಕಾರ್ಜುನ ಪಂಡಿತಾರಾಧ್ಯ

ಪೂರ್ವಕರ್ಮವ ಕೆಡಸಿದನೆನ್ನ ಗುರು

ಪೂರ್ವಕರ್ಮವ ಕೆಡಸಿದನೆನ್ನ ಗುರು
ಉಭಯ ಕರ್ಮವ ಬಿಡಿಸಿ ತೋರಿದ ಶರಣರ.
ಅವರಿಂದ ಬದುಕಿದೆನು.
ತೋರಿದ ಸದುಭಕ್ತರ;
ಅವರಿಂದ ಬದುಕಿದೆನು.
ನಾಚಯ್ಯಪ್ರಿಯ ಮಲ್ಲಿನಾಥಯ್ಯಾ,ಗುರುವಿಂದ ಬದುಕಿದೆನು, ನಿಮ್ಮ ಹಂಗೇನು?

-ದಶಗಣ ಸಿಂಗಿದೇವಯ್ಯ